Tuesday, May 7, 2024
Homeಕರಾವಳಿಬೆಳ್ತಂಗಡಿ : ಟಿಕೆಟ್ ಗೊಂದಲ ಹಾಗೂ ಮುಂದಿನ ಮುಖ್ಯಮಂತ್ರಿಗಾಗಿ ಹೆಚ್ಡಿಕೆಯಿಂದ ಹರಕೆ ಸೇವೆ;  ನಾಳ ಶ್ರೀ...

ಬೆಳ್ತಂಗಡಿ : ಟಿಕೆಟ್ ಗೊಂದಲ ಹಾಗೂ ಮುಂದಿನ ಮುಖ್ಯಮಂತ್ರಿಗಾಗಿ ಹೆಚ್ಡಿಕೆಯಿಂದ ಹರಕೆ ಸೇವೆ;  ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಮಾರಸ್ವಾಮಿಯಿಂದ ವಿಶೇಷ ಪೂಜೆ

spot_img
- Advertisement -
- Advertisement -

ಬೆಳ್ತಂಗಡಿ : ರಾಜಕೀಯದಲ್ಲಿ ಆಗಿರುವ ಗೊಂದಲ ಹಾಗೂ ಮುಂದಿನ ಮುಖ್ಯಮಂತ್ರಿಯಾಗಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳ್ತಂಗಡಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಎ.15 ರಂದು ರಾತ್ರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಅಸ್ರಣ್ಣನವರ ನೇತೃತ್ವದ 12 ಜನರ ಪುರೋಹಿತರ ನೇತೃತ್ವದಲ್ಲಿ ಹರಕೆ ಪೂಜೆ ನೆರವೇರಿಸಿದರು.

ಧರ್ಮಸ್ಥಳ ಸನ್ನಿಧಿ ವಸತಿಗೃಹದಿಂದ  ನೇರವಾಗಿ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಚಿಕ್ಕಮಗಳೂರು ಜೆಡಿಎಸ್ ಎಂ.ಎಲ್.ಸಿ ಬೋಜೆಗೌಡರ ಜೊತೆ ಕಾರಿನಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಟಿಕೆಟ್ ಗೊಂದಲದ ವೇಳೆ ಹರಕೆ ಹೇಳಿದ್ದರು. ಅದರಂತೆ ಪೂಜೆ ಸಲ್ಲಿಸಿದ್ದಾರೆ. ಅದಲ್ಲದೆ ಜೆಡಿಎಸ್ ಪಕ್ಷದ ಭವಿಷ್ಯದ ಬಗ್ಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿಯವರು ನಮ್ಮ ನಾಡಿನ ಜನತೆಗೆ ಒಳ್ಳೆಯದು ಆಗಬೇಕು ಹಾಗೂ ನಮ್ಮ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಫಲ ಸಿಗಬೇಕು ಹಾಗೂ ಎಲ್ಲಾ ವಿಚಾರಗಳಲ್ಲಿ ವಿಶೇಷ ಪೂಜೆ ಸಲ್ಲಿಸಿರುದಾಗಿ ಹೇಳಿದರು. ಟಿಕೆಟ್ ಹಂಚಿಕೆ ಗೊಂದಲ ಪರಿಹಾರವಾಗಿದ್ದಕ್ಕೆ  ಹರಕೆ ಪೂಜೆ ಸಲ್ಲಿಸಿದ್ದೀರಾ ಅನ್ನೋ ಪ್ರಶ್ನೆಗೆ ಅವರು ಹೌದು ಎಲ್ಲಾ ವಿಚಾರದಲ್ಲಿ ಕೂಡ ಪೂಜೆ ಸಲ್ಲಿಸಿದ್ದೇನೆ ಎಂದರು.

ಜೆಡಿಎಸ್ ಪಕ್ಷದ ಒಳಿತಾಗಿ ಪೂಜೆ; ರಾಘವೇಂದ್ರ ಅಸ್ರಣ್ಣ

ಕುಮಾರಸ್ವಾಮಿ ಅವರ ಮುಖ್ಯಮಂತ್ರಿಯಾಗುವ ಕನಸು ಇಡೇರಬೇಕು ಹಾಗೂ ಟಿಕೆಟ್ ಗೊಂದಲ ಪರಿಹಾರವಾಗಬೇಕು  ಎಂದು ಸ್ವತಃ ಕುಮಾರಸ್ವಾಮಿಯವರೇ  ಕರೆ ಮಾಡಿ ರಾಘವೇಂದ್ರ ಅಸ್ರಣ್ಣರಲ್ಲಿ ಕೇಳಿದರಿಂದ ಅವರ ಸಲಹೆ ಮೇರೆಗೆ ಹರಕೆ ಹೇಳಿದ್ದರು ಎರಡು ದಿನದಲ್ಲಿ ಸಮಸ್ಯೆ ಬಗೆಹರಿದಿದ್ದು ಅದರಂತೆ ಕಳೆದ ಐದು ದಿನಗಳಿಂದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪಂಚದುರ್ಗಾ ಹೋಮ , ರಾಜ ದುರ್ಗಾ ಹೋಮ, ವನದುರ್ಗಾ ಹೋಮ , ಪ್ರತ್ಯಂಗೀರ ಹೋಮ ನಡೆಸಲಾಗಿದೆ. ಇದೀಗ ಸ್ವತಃ ಕುಮಾರಸ್ವಾಮಿಯವರು ದೇವಸ್ಥಾನಕ್ಕೆ ಬಂದು ಪೂಜೆಯಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಅಸ್ರಣ್ಣವರು ಮಹಾ ಎಕ್ಸ್‌ಪ್ರೆಸ್‌ ವೆಬ್ ಸೈಟ್ ಗೆ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!