Saturday, June 6, 2026
Homeಕರಾವಳಿಸುಳ್ಯ: ಅಜ್ಜಾವರದಲ್ಲಿ ತಾಯಿಯಿಂದ ದೂರವಾದ ಮರಿಯಾನೆಯನ್ನು ದುಬಾರೆಗೆ ಶಿಫ್ಟ್ ಮಾಡಲು ನಿರ್ಧಾರ

ಸುಳ್ಯ: ಅಜ್ಜಾವರದಲ್ಲಿ ತಾಯಿಯಿಂದ ದೂರವಾದ ಮರಿಯಾನೆಯನ್ನು ದುಬಾರೆಗೆ ಶಿಫ್ಟ್ ಮಾಡಲು ನಿರ್ಧಾರ

- Advertisement -
- Advertisement -

ಸುಳ್ಯ; ಅಜ್ಜಾವರ ತುದಿಯಡ್ಕದಲ್ಲಿ ಕೆರೆಗೆ ಬಿದ್ದು ತಾಯಿ ಆನೆಯಿಂದ ದೂರವಾಗಿದ್ದ ಮರಿ ಆನೆಯನ್ನು ಕೊಡಗಿನ ಆನೆ ಶಿಬಿರ ದುಬಾರೆಗೆ ಶಿಫ್ಟ್‌ ಮಾಡಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ. ತಾಯಿ ಆನೆಯ ಜತೆ ಸೇರಿಸಲು ಮತ್ತೆ ಪ್ರಯತ್ನ ಮಾಡಿದರೂ ಅದು ವಿಫಲವಾದ ಹಿನ್ನೆಲೆ ಮರಿ ಆನೆಯನ್ನು ದುಬಾರೆಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ್  ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ಅಜ್ಜಾವರದ ಕೆರೆಯೊಂದರಲ್ಲಿ ನಾಲ್ಕು ಆನೆಗಳು ಬಿದ್ದಿದ್ದವು. ಊರವರ ಹಾಗೂ ಅರಣ್ಯಾಧಿಕಾರಿಗಳ ಸಹಕಾರದಿಂದ ಆನೆಗಳನ್ನು ಮೇಲೆತ್ತುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿತ್ತು. ಆದರೆ ಮೂರು ತಿಂಗಳ ಮರಿ ಆನೆ ಕೆರೆಯಲ್ಲಿ ಬಾಕಿ ಆಗಿತ್ತು. ತಾಯಿ ಆನೆ, ಮರಿ ಆನೆಯನ್ನು ತನ್ನ ಜತೆ ಸೇರಿಸಿಕೊಳ್ಳಲೇ ಇಲ್ಲ. ಹಾಗಾಗಿ ಇದೀಗ ಮರಿಯಾನೆಯನ್ನು ದುಬಾರೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ.

- Advertisement -

Latest News

error: Content is protected !!