Thursday, June 4, 2026
Homeಕರಾವಳಿಮಂಗಳೂರು ; ಯುವ ಕಾಂಗ್ರೆಸ್ ಮುಖಂಡನಿಗೆ ಐಟಿ ಶಾಕ್

ಮಂಗಳೂರು ; ಯುವ ಕಾಂಗ್ರೆಸ್ ಮುಖಂಡನಿಗೆ ಐಟಿ ಶಾಕ್

- Advertisement -
- Advertisement -

ಮಂಗಳೂರು: ಯುವ ಕಾಂಗ್ರೆಸ್ ಮುಖಂಡನಿಗೆ ಐಟಿ ಅಧಿಕಾರಗಳು ಶಾಕ್ ಕೊಟ್ಟಿದ್ದಾರೆ.

ಮಂಗಳೂರಿನ ಮಣ್ಣಗುಡ್ಡದಲ್ಲಿರುವ ವಿವೇಕ್ ರಾಜ್ ಪೂಜಾರಿ ಮನೆಗೆ 2 ಕಾರಿನಲ್ಲಿ ಬಂದ 8 ಮಂದಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಏಕಾಏಕಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಳಗ್ಗೆ ಸುಮಾರು 7 ಗಂಟೆಗೆ ರಾಜ್ಯದ ಬೇರೆ ಬೇರೆ ಕಡೆಯ 14 ಮಂದಿ ಅಧಿಕಾರಿಗಳು ವಿವೇಕ್ ರಾಜ್ ಪೂಜಾರಿಗೆ ಸೇರಿದ ಅತ್ತಾವರ ಮತ್ತು ಮಣ್ಣಗುಡ್ಡೆಯಲ್ಲಿರುವ ಎರಡು ಮನೆಗೆ ಹಾಗೂ ವಿವೇಕನಗರದಲ್ಲಿರುವ ಕಚೇರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ವಿವೇಕ್ ರಾಜ್ ಪೂಜಾರಿ ‘ನನ್ನ ವ್ಯವಹಾರದ ದಾಖಲೆಪತ್ರಗಳೆಲ್ಲವೂ ಸಮರ್ಪಕವಾಗಿದೆ. ನಾನು ತೆರಿಗೆ ವಂಚಿಸಿ ವ್ಯವಹರಿಸುವುದಿಲ್ಲ. ಇದು ಬಿಜೆಪಿಗರ ಕುಮ್ಮಕ್ಕಿನಿಂದ ನಡೆದ ಐಟಿ ದಾಳಿಯಾಗಿದೆ. ದಾಳಿಯಲ್ಲಿ ಐಟಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪನಾಮಾ ಸಂಸ್ಥೆಯ ಮಾಲೀಕರಾಗಿರುವ ವಿವೇಕ್ ರಾಜ್ ಪೂಜಾರಿ ಹಲವಾರು ಉದ್ಯಮಗಳನ್ನು ಹೊಂದಿದ್ದಾರೆ.

- Advertisement -

Latest News

error: Content is protected !!