Sunday, June 7, 2026
Homeಕರಾವಳಿಮಂಗಳೂರು : ಹಿರಿಯ ದೈವಾರಾಧಕ ಪಂಜ ನಲ್ಯ ಗುತ್ತಿನಾರ್ ಕುಡುಂಬೂರ್ ಭೋಜ ಶೆಟ್ಟಿ ನಿಧನ

ಮಂಗಳೂರು : ಹಿರಿಯ ದೈವಾರಾಧಕ ಪಂಜ ನಲ್ಯ ಗುತ್ತಿನಾರ್ ಕುಡುಂಬೂರ್ ಭೋಜ ಶೆಟ್ಟಿ ನಿಧನ

- Advertisement -
- Advertisement -

ಮಂಗಳೂರು : ಹಿರಿಯ ದೈವಾರಾಧಕ , ಸುಧೀರ್ಘ ಕಾಲ ದೈವಾರಾಧನೆಯ ಕ್ಷೇತ್ರದಲ್ಲಿ ಗಡಿಕಾರರಾಗಿ ಸೇವೆ ಸಲ್ಲಿಸಿದ , ಪಂಜ ಕೊಯ್ಕುಡೆ ಶ್ರೀ ಹರಿಪಾದೆ ಜಾರಂದಾಯ ದೈವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಪಂಜ ನಲ್ಯ ಗುತ್ತಿನಾರ್ ಕುಡುಂಬೂರ್ ಭೋಜ ಶೆಟ್ಟಿ (86) ಅವರು ಇಂದು ಬೆಳಿಗ್ಗೆ ಕುಡುಂಬೂರಿನ ಸ್ವಗ್ರಹದಲ್ಲಿ ನಿಧನರಾದರು.


ಸಮಾಜಸೇವೆಯಲ್ಲಿ ಸದಾ ಮುಂಚೂಣಿಯಲ್ಲಿ ಇದ್ದ ಇವರು ಕೊಡುಗೈ ದಾನಿಯಾಗಿದ್ದರು. ಮಂಗಳೂರಿನ ಬೈಕಂಪಾಡಿ ಕುಡುಂಬೂರ್ ಕೈಗಾರಿಕಾ ವಲಯ ಸ್ಥಾಪನೆಯಾಗಿದ್ದಾಗ ಸುಮಾರು 100 ಕ್ಕೂ ಹೆಚ್ಚು ಮೂಲ ನಿವಾಸಿಗಳ ವಸತಿ ಕಾಲೋನಿ ನಿರ್ಮಿಸಲು ಬಹಳಷ್ಟು ಹೋರಾಟ ನಡೆಸಿದ್ದರು.ಬೈಕಂಪಾಡಿ ಕುಡುಂಬೂರಿನ ಕೈಗಾರಿಕಾ ವಲಯ ಸ್ಥಾಪನೆಯಾಗುವ ಮುಂಚೆ ಪ್ರಗತಿಪರ ಕೃಷಿಕರಾಗಿದ್ದ ಇವರು ಕಂಬಳದ ಕೋಣಗಳ ಯಜಮಾನ ಆಗಿದ್ದರು
ಪುರಾಣ ಪ್ರಸಿದ್ಧ ಪಂಜ ಕೊಯ್ಕುಡೆ ಶ್ರೀ ಹರಿಪಾದೆ ಜಾರಂದಾಯ ದೈವಸ್ಥಾನದ ಅನುವಂಶೀಯ ಆಡಳಿತ ಮುಕ್ತೇಸರರಾದ ನಂತರ ಕ್ಷೆತ್ರವನ್ನು ಬಹಳಷ್ಟು ಅಭಿವೃದ್ಧಿಗೊಳಿಸಿ ಸರ್ವ ಜನರ ಪ್ರೀತಿಗೆ ಪಾತ್ರರಾಗಿದ್ದರು .
ಮೃತರು ಓರ್ವ ಪುತ್ರಿ ,ಇಬ್ಬರು ಪುತ್ರರು ಸೇರಿ ಅಪಾರ ಪ್ರಮಾಣದ ಬಂದು ಬಳಗವನ್ನು ಅಗಲಿದ್ದಾರೆ
ಮೃತರ ಅಂತಿಮ ಸಂಸ್ಕಾರ ಇಂದು ಬೆಳಿಗ್ಗೆ ನಲ್ಯ ಗುತ್ತು ಮನೆಯಲ್ಲಿ ತುಳು ನಾಡಿನ ಗಡಿ ಸಂಪ್ರದಾಯದಂತೆ ನಡೆಯಲಿದೆ

- Advertisement -

Latest News

error: Content is protected !!