- Advertisement -
![]()
- Advertisement -
ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಪ್ಯಾಲೆಸ್ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ 50 ವರ್ಷದ ಲಕ್ಷ್ಮೀ ಪ್ರಾಣ ದೇವಿ ಕಳೆದುಕೊಂಡಿದ್ದಾರೆ.
ಲಕ್ಷ್ಮೀ ದೇವಿ ಅವರು ತಮ್ಮ ಸಹೋದರನ ಜೊತೆ ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದವೇಳೆ ಹಿಂಬದಿಯಿಂದ ಬೈಕ್‌ಗೆ ಬಸ್ ಟಚ್ ಅಗಿದ್ದು, ಅವರು ಕೆಳಕ್ಕೆ ಬಿದ್ದಿದ್ದರು. ಈ ವೇಳೆ ಬಸ್ ಏಕಾಏಕಿ ಲಕ್ಷ್ಮಿ ದೇವಿಯವರ ಮೇಲೆಯೇ ಹರಿದಿದೆ.
ಪರಿಣಾಮ ಬಸ್ ಚಕ್ರದಡಿಗೆ ಸಿಲುಕಿ ಲಕ್ಷ್ಮೀದೇವಿ ಮೃತಪಟ್ಟಿದ್ದಾರೆ. ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಸಾರಿಗೆ ಬಸ್‌ನ ಚಾಲಕನ ನಿರ್ಲಕ್ಷದಿಂದ ಅಪಘಾತ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
- Advertisement -


