Friday, June 5, 2026
Homeಕರಾವಳಿಇಂದಿನಿಂದ ಮಂಗಳೂರು- ಕಾಸರಗೋಡು ನಡುವಣ ಕೆಎಸ್‌ಆರ್ ಟಿಸಿ ಸಂಚಾರ ಆರಂಭ!.. ಕೊಂಚ ರಿಲೀಫ್ ಆದ ಗಡಿನಾಡ...

ಇಂದಿನಿಂದ ಮಂಗಳೂರು- ಕಾಸರಗೋಡು ನಡುವಣ ಕೆಎಸ್‌ಆರ್ ಟಿಸಿ ಸಂಚಾರ ಆರಂಭ!.. ಕೊಂಚ ರಿಲೀಫ್ ಆದ ಗಡಿನಾಡ ವಿದ್ಯಾರ್ಥಿಗಳು

- Advertisement -
- Advertisement -

ಮಂಗಳೂರು: ಕೋವಿಡ್-19 ಲಾಕ್ ಡೌನ್ ಉಂಟಾದ ನಂತರ ಮಂಗಳೂರು- ಕಾಸರಗೋಡು ನಡುವಣ ಕೆಎಸ್‌ಆರ್ ಟಿಸಿ ಬಸ್ ಸಂಚಾರವನ್ನು ನಿಲ್ಲಿಸಲಾಗಿತ್ತು.ಆದರೆ ಇಂದಿನಿಂದ ಮುಕ್ತ ಸಂಚಾರ ಆರಂಭಗೊಂಡಿದೆ. ಕಳೆದ ಎಂಟು ತಿಂಗಳಿನಿಂದ ಉಭಯ ಜಿಲ್ಲೆಗಳ ನಡುವಣ ಬಸ್ ಸಂಚಾರ ಸ್ಥಗಿತಗೊಂಡಿತ್ತು.

ಇದೀಗ ಎರಡೂ ಜಿಲ್ಲೆಗಳ ಕೆಎಸ್‌ಆರ್ ಟಿಸಿ ನಿರ್ಧಾರದ ಕಾರಣದಿಂದಾಗಿ ತಲಾ‌ 10 ಬಸ್ ಗಳು ಕಾರ್ಯಾಚರಣೆ ಆರಂಭಿಸಿ ಬಸ್ ಸಂಚಾರ ಆರಂಭಕಂಡಿದೆ.ಮುಂದೆ‌ ಪ್ರಯಾಣಿಕರ ಅಗತ್ಯತೆಗಳ ಅನುಗಣವಾಗಿ ಬಸ್ ಸಂಖ್ಯೆ ಹೆಚ್ಚಳ ಮಾಡಲಾಗುವುದು ಎಂದು ಕೆಎಸ್‌ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!