Thursday, June 4, 2026
Homeಕರಾವಳಿಉಡುಪಿಯಕ್ಷಗಾನದಲ್ಲೂ ಇದೇ ಕೊತ್ತಿಮೀರಿ ಸೊಪ್ಪಿನ ಹವಾ...

ಯಕ್ಷಗಾನದಲ್ಲೂ ಇದೇ ಕೊತ್ತಿಮೀರಿ ಸೊಪ್ಪಿನ ಹವಾ…

- Advertisement -
- Advertisement -

ಕಳೆದ ಎರಡು ದಿನಗಳಿಂದ ಎಲ್ಲಿ ಹೋದ್ರೂ ಕೊತ್ತಂಬರಿ ಸೊಪ್ಪಿನದ್ದೇ ಪರಿಮಳ. ಟಿವಿ, ವಾಟ್ಸಾಫ್, ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಎಲ್ಲಾ ಕಡೆ ಬರೀ ಕೊತ್ತಿಮೀರಿ ಸೊಪ್ಪಿನದ್ದೇ ಸದ್ದು. ಕಳೆದೆರಡು ದಿನಗಳಲ್ಲಿ ಕೊತ್ತಂಬರಿ ಸೊಪ್ಪು ಎಷ್ಟರ ಮಟ್ಟಿಗೆ ಫೇಮಸ್ ಆಯ್ತು ಅಂದ್ರೆ ಉಳಿದ ಸೊಪ್ಪುಗಳಾದ ಪಾಲಕ್ ಸೊಪ್ಪು, ಪುದೀನ ಸೊಪ್ಪು, ಮೆಂತ್ಯ ಸೊಪ್ಪುಗಳು ಹೊಟ್ಟೆ ಉರ್ಕೊಂಡು ಸುಸೈಡ್ ಮಾಡೋ ರೇಂಜ್ ಗೆ ಕೊತ್ತಂಬರಿ ಸೊಪ್ಪು ನೇಮು ಫೇಮು ಪಡ್ಕೊಂಡಿದೆ.

ಹಳ್ಳಿಯಿಂದ ದಿಲ್ಲಿವರೆಗೂ ಈಗ ಕೊತ್ತಂಬರಿ ಸೊಪ್ಪಿನದ್ದೇ ವಿಚಾರ. ಒಂದು ಕೊತ್ತಂಬರಿ ಸೊಪ್ಪು ಈ ರೇಂಜಿಗೆ ಹವಾ ಕ್ರಿಯೇಟ್ ಮಾಡುತ್ತೆ ಅಂತಾ ಯಾರು ಕೂಡ ಊಹೆ ಮಾಡಿರಲಿಲ್ಲ. ಯಾರೂ ಕೂಡ ಇದುವೆರಗೂ ಟ್ರೋಲ್ ಆಗದಷ್ಟು ಟ್ರೋಲ್ ಆಗಿದೆ ಈ ಕೊತ್ತಿಮೀರಿ ಸೊಪ್ಪು. ಆದ್ರೆ ನಿಮಗೆಲ್ಲಾ ಒಂದು ಇಂಟರೆಸ್ಟಿಂಗ್ ವಿಷ್ಯಾ ಗೊತ್ತಾ? ಏನು ಅಂತಾ ಜಾಸ್ತಿ ಥಿಂಕ್ ಮಾಡ್ಬೇಡಿ. ನಾವೇ ಹೇಳ್ತೀವಿ ಕೇಳಿ. ಈ ಕೊತ್ತಂಬರಿ ಸೊಪ್ಪಿನ ವಿಷ್ಯ ನಮ್ಮ ಕರಾವಳಿಯ ಕಲೆ ಯಕ್ಷಗಾನದ ಒಂದು ಪ್ರಸಂಗದಲ್ಲಿ ಪ್ರಸ್ತಾಪ ಆಗಿದೆ ಅಂದ್ರೆ ನೀವು ನಂಬ್ಲೇ ಬೇಕು.

ಒಂದು ಕೋತ್ತಿಮೀರಿ ಕಥೆ . .

Posted by Prathap Hegde on Tuesday, 18 August 2020

ಹೊಸನಗರ ಮೇಳದ ದೇವಿ ಮಹಾತ್ಮೆ ಪ್ರಸಂಗದ ಮಹಿಷ ಮರ್ಧಿನಿ ಸನ್ನಿವೇಶದಲ್ಲಿ ಕೊತ್ತಂಬರಿ ವಿಚಾರಕ್ಕೆ ಸಂಬಂಧ ಪಟ್ಟ ಹಾಸ್ಯದ ಸನ್ನಿವೇಶ ಬರುತ್ತೆ. ಅದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ವಿಡಿಯೋ ನೋಡಿದವರೆಲ್ಲಾ ಕೊತ್ತಿಮೀರಿ ಸಾಮಾನ್ಯ ಅಲ್ಲ ಬಿಡಿ ಅಂತಾ ಮಾತಾಡಿಕೊಳ್ತಿದ್ದಾರೆ.

- Advertisement -

Latest News

error: Content is protected !!