Wednesday, June 3, 2026
Homeಅಪರಾಧಕೋಟೆಕಾರು ಸಹಕಾರಿ ಬ್ಯಾಂಕ್​ ದರೋಡೆ ಪ್ರಕರಣ; ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯೋರ್ವನಿಗೆ ಪೊಲೀಸರಿಂದ ಗುಂಡಿನೇಟು

ಕೋಟೆಕಾರು ಸಹಕಾರಿ ಬ್ಯಾಂಕ್​ ದರೋಡೆ ಪ್ರಕರಣ; ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯೋರ್ವನಿಗೆ ಪೊಲೀಸರಿಂದ ಗುಂಡಿನೇಟು

- Advertisement -
- Advertisement -


ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣವು ರಾಜ್ಯದಲ್ಲಿ ಸದ್ದು ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ (ಜ.21) ರಂದು ನಡೆದಿದೆ. 

ಮಂಗಳೂರು ಸಿಟಿ ಕ್ರೈಂ ಬ್ರ್ಯಾಂಚ್‌ ಪೊಲೀಸರು ಆರೋಪಿ ಮುಂಬೈ ಚೆಂಬೂರು ತಿಲಕ್‌ ನಗರ ನಿವಾಸಿ ಕಣ್ಣನ್‌ ಮಣಿ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸ್ಥಳ ಮಹಜರು ಮಾಡುವ ವೇಳೆ ತಪ್ಪಿಸಿಕೊಳ್ಳಲು ಕಣ್ಣನ್‌ ಮಣಿ ಯತ್ನ ನಡೆಸಿದ್ದು, ಈ ಸಂದರ್ಭದಲ್ಲಿ ಗುಂಡಿನದ ದಾಳಿ ನಡೆದಿದೆ.   

ಈ ಘಟನೆಯು ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕರ್ನಾಟಕ – ಕೇರಳ ಗಡಿಯ ತಲಪಾಡಿ ಗ್ರಾಮದ ಕಾಟುಂಗರ ಗುಡ್ಡೆ ಬಳಿ ನಡೆದಿದೆ.

- Advertisement -

Latest News

error: Content is protected !!