Wednesday, June 24, 2026
Homeಕರಾವಳಿಉಡುಪಿಲಂಚ ಪಡೆದ ಆರೋಪದಡಿ ಕೋಟ ಎಸ್ ಐ ಶಂಭುಲಿಂಗಯ್ಯ ಅಮಾನತು

ಲಂಚ ಪಡೆದ ಆರೋಪದಡಿ ಕೋಟ ಎಸ್ ಐ ಶಂಭುಲಿಂಗಯ್ಯ ಅಮಾನತು

- Advertisement -
- Advertisement -

ಕುಂದಾಪುರ: ಲಂಚ ಪಡೆದ ಆರೋಪದ ಮೇಲೆ ಕೋಟ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಂಭುಲಿಂಗಯ್ಯ ಅವರನ್ನು ಅಮಾನತು ಮಾಡಲಾಗಿದೆ.ಶಂಭುಲಿಂಗಯ್ಯ, ಪ್ರಸ್ತುತ ನಿಯೋಜನೆ ಮೇರೆಗೆ ಕಾರ್ಕಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕೋಟದ ಮಧುವನದ ಇಸಿಆರ್ ಕಾಲೇಜು ವಿವಾದ ಪ್ರಕರಣದಲ್ಲಿ ಲಂಚ ಪಡೆದ ಅರೋಪ ಶಂಭುಲಿಂಗಯ್ಯ ಮೇಲಿದೆ.ಆಡಳಿತ ಮಂಡಳಿಯ ವಿವಾದದ ವಿಚಾರವಾಗಿ ಹಣ ಪಡೆದಿದ್ದ ಆರೋಪ ವ್ಯಕ್ತವಾಗಿದ್ದು, ಆಡಳಿತ ಮಂಡಳಿಯ ಮಧು ಭಾಸ್ಕರ್ ವಿರುದ್ಧ ದೂರು ದಾಖಲಿಸಲು ಲಂಚ ಪಡೆದ ಆರೋಪ ವ್ಯಕ್ತವಾಗಿದೆ.

ಅಲ್ಲದೇ ಮಹಿಮಾ ಮಧು ಭಾಸ್ಕರ್ ವಿರುದ್ಧದ ಪ್ರಕರಣಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಶಂಭುಲಿಂಗಯ್ಯ ಹಣ ಪಡೆದಿದ್ದ ಆರೋಪದಡಿ ಅಮಾನತು ಮಾಡಲಾಗಿದೆ.

- Advertisement -

Latest News

error: Content is protected !!