Friday, May 3, 2024
Homeಕರಾವಳಿಬೆಳ್ತಂಗಡಿ; ಕುವೆಟ್ಟಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು

ಬೆಳ್ತಂಗಡಿ; ಕುವೆಟ್ಟಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು

spot_img
- Advertisement -
- Advertisement -

ಬೆಳ್ತಂಗಡಿ; ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟಿನಲ್ಲಿ ನಡೆದಿದೆ. ಕುವೆಟ್ಟು ಗ್ರಾಮದ ಬೆಳ್ತಂಗಡಿ ನಿವಾಸಿ ಸುಲೈಮಾನ್ ಅವರ ಮನೆಯಲ್ಲಿ 09.12.2023 ರ ಸಂಜೆಯಿಂದ ದಿನಾಂಕ;10.12.2023 ರವರೆಗೆ  ಮನೆಯಲ್ಲಿ ಯಾರೂ ಇರಲಿಲ್ಲ. ಈ ವೇಳೆ  ಯಾರೋ ಕಳ್ಳರು ಮನೆಯ ಎದುರಿನ ಬಾಗಿಲಿನ ಲಾಕ್ ನ್ನು ಮುರಿದು ಒಳಪ್ರವೇಶಿಸಿ  ಬೆಡ್ ರೂಮಿನ ಕಪಾಟಿನ ಬಾಗಿಲು ಮುರಿದು ಒಟ್ಟು 69 ½  ಗ್ರಾಂ ತೂಕದ ಚಿನ್ನಾಭರಣ  ಹಾಗೂ 40,000 ನಗದು ಹಣವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಕಳವಾದ ಚಿನ್ನಾಭರಣದ  ಒಟ್ಟು ಮೌಲ್ಯ 3,87,500 ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ 119/2023 ಕಲಂ;457,454,380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -
spot_img

Latest News

error: Content is protected !!