Saturday, August 29, 2026
Homeಕರಾವಳಿಉಡುಪಿಉಡುಪಿ: ಹಾಲಿನ ಕ್ರೇಟ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಪಿಕಪ್ ವಾಹನ:ರಸ್ತೆ ಪಾಲಾದ ಸಾವಿರಾರು ರೂ....

ಉಡುಪಿ: ಹಾಲಿನ ಕ್ರೇಟ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಪಿಕಪ್ ವಾಹನ:ರಸ್ತೆ ಪಾಲಾದ ಸಾವಿರಾರು ರೂ. ಮೌಲ್ಯದ ಹಾಲು

- Advertisement -
- Advertisement -

ಉಡುಪಿ: ಹಾಲಿನ ಬೂತ್ ಎದುರು ಜೋಡಿಸಿಟ್ಟಿದ್ದ ಹಾಲಿನ ಕ್ರೇಟ್ ಗೆ ಪಿಕಪ್ ವಾಹನ ಡಿಕ್ಕಿ ಹೊಡೆದು ಹಾಲು ರಸ್ತೆ ಪಾಲಾದ ಘಟನೆ ಉಡುಪಿ ನಗರದ ಕಡಿಯಾಳಿಯಲ್ಲಿ ನಡೆದಿದೆ.

ಇಂದು ಮುಂಜಾನೆ ಮಣಿಪಾಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಹಾಲಿನ ಪ್ಯಾಕೆಟ್ ಗಳನ್ನು ತುಂಬಿ ಜೋಡಿಸಿಟ್ಟಿದ್ದ ಕ್ರೇಟ್ ಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.

ಈ ವೇಳೆ ಕೂದಲೆಳೆಯ ಅಂತರದಲ್ಲಿ ಅಲ್ಲೇ ಇದ್ದ ಬೈಕ್ ಹಾಗೂ ಸೈಕಲ್ ಸವಾರರು ಪಾರಾಗಿದ್ದಾರೆ.ಪಿಕಪ್ ವಾಹನ ಡಿಕ್ಕಿ ಹೊಡೆದ ಕಾರಣ ಸಾವಿರಾರು ರೂಪಾಯಿ ಮೌಲ್ಯದ ನಂದಿನಿ ಹಾಲು ರಸ್ತೆಗೆ ಚೆಲ್ಲಿ ಹೋಗಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!