Sunday, June 7, 2026
Homeಕರಾವಳಿಉಡುಪಿಉಡುಪಿ: ನಿವೃತ್ತಿಯ ದಿನದಂದೇ ಕುಸಿದು ಬಿದ್ದಿದ್ದ ಎಎಸ್ಸೈ ಆನಂದ ವೆಂಕಟರಾಮ್ ನಿಧನ

ಉಡುಪಿ: ನಿವೃತ್ತಿಯ ದಿನದಂದೇ ಕುಸಿದು ಬಿದ್ದಿದ್ದ ಎಎಸ್ಸೈ ಆನಂದ ವೆಂಕಟರಾಮ್ ನಿಧನ

- Advertisement -
- Advertisement -

ಕೋಟ: ಸೇವೆಯ ಕೊನೆಯ ದಿನದಂದು ಅಸ್ವಸ್ಥರಾಗಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಕೋಟ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್ಸೈ) ಆನಂದ ವೆಂಕಟರಾಮ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬೈಂದೂರು ನಿವಾಸಿಯಾಗಿರುವ ಆನಂದ್, ಮೂಡುಬಿದ್ರೆ, ಕೋಟ, ಶಂಕರ ನಾರಾಯಣ, ಗಂಗೊಳ್ಳಿ, ಕಾಪು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಎಎಸೈ ಆಗಿ ಭಡ್ತಿ ಹೊಂದಿದ ಮೇಲೆ ಇವರು ಕೋಟ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ನಿವೃತ್ತಿಯಾಗಿರುವ ಇವರಿಗೆ ರವಿವಾರ ಕೋಟ ಪೊಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಊಟ ಮಾಡುತ್ತಿದ್ದ ಇವರು ಅಲ್ಲೇ ಕುಸಿದು ಬಿದ್ದು ತೀವ್ರವಾಗಿ ಅಸ್ವಸ್ಥರಾದರೆನ್ನಲಾಗಿದೆ.

ಮೆದಳಿನ ಸಂಬಂಧದ ಕಾಯಿಲೆಗೆ ತುತ್ತಾಗಿದ್ದ ಇವರು, ಚಿಕಿತ್ಸೆ ಫಲಕಾರಿ ಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!