Saturday, June 13, 2026
Homeತಾಜಾ ಸುದ್ದಿಖ್ಯಾತ ಮಲೆಯಾಳಂ ಹಾಸ್ಯ ನಟ ಕೊಲ್ಲಂ ಸುಧಿ ಅಪಘಾತಕ್ಕೆ ಬಲಿ

ಖ್ಯಾತ ಮಲೆಯಾಳಂ ಹಾಸ್ಯ ನಟ ಕೊಲ್ಲಂ ಸುಧಿ ಅಪಘಾತಕ್ಕೆ ಬಲಿ

- Advertisement -
- Advertisement -

ಕೇರಳ; ಖ್ಯಾತ ಮಲೆಯಾಳಂ ಹಾಸ್ಯ ನಟ ಕೊಲ್ಲಂ ಸುಧಿ ಅಪಘಾತಕ್ಕೆ ಬಲಿಯಾಗಿದ್ದಾರೆ.ಸುಧಿ ಅವರು ಸಹ ಕಲಾವಿದರಾದ ಮಹೇಶ್, ಬಿನು ಅಡಿಮಾಲಿ ಮತ್ತು ಉಲ್ಲಾಸ್ ಅರೂರ್ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಅವರ ಕಾರು ತ್ರಿಶೂರ್ ಕಯ್ಪಮಂಗಲಂ ಪಣಾಂಬಿಕುನ್‌ನಲ್ಲಿ ಮುಂಜಾನೆ 4:30 ಕ್ಕೆ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ. ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾದ್ರೂ ಸುಧಿ ಅವರು ಅಷ್ಟರಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಅವರೆಲ್ಲರೂ ವಡಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ಹಿಂತಿರುಗುತ್ತಿದ್ದಾಗ ಕಾರು ಪಿಕಪ್ ಗೆ ಮುಖಾಮುಖಿ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಧಿ ತಲೆಗೆ ತೀವ್ರ ಪೆಟ್ಟಾಗಿದೆ. ಅವರನ್ನು ಕೊಡಂಗಲ್ಲೂರಿನ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಇನ್ನು ಮೂವರು ಕೊಡಂಗಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!