Thursday, June 4, 2026
Homeತಾಜಾ ಸುದ್ದಿಮಂಗಳೂರು: ಕಿಡಿಗೇಡಿಗಳಿಂದ ನಾಗಬನಕ್ಕೆ ಹಾನಿ, ಸ್ಥಳಕ್ಕೆ ಸಂಸದ, ಶಾಸಕರ ಭೇಟಿ

ಮಂಗಳೂರು: ಕಿಡಿಗೇಡಿಗಳಿಂದ ನಾಗಬನಕ್ಕೆ ಹಾನಿ, ಸ್ಥಳಕ್ಕೆ ಸಂಸದ, ಶಾಸಕರ ಭೇಟಿ

- Advertisement -
- Advertisement -

ಮಂಗಳೂರು: ನಗರದ ಕೋಡಿಕಲ್ ಬಳಿಯ ನಾಗನ ಬನದಲ್ಲಿದ್ದ ವಿಗ್ರಹವನ್ನು ದುಷ್ಕರ್ಮಿಗಳು ಎಸೆದು ದುಷ್ಕೃತ್ಯ ಮೆರೆದ ಸ್ಥಳಕ್ಕೆ ಇಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್‌ ಶೆಟ್ಟಿ ಭೇಟಿ ನೀಡಿದರು.

ನಾಗನ ವಿಗ್ರಹವನ್ನು ಯಾರೋ ದುಷ್ಕರ್ಮಿಗಳು ಎಸೆದು ದುಷ್ಕೃತ್ಯ ಮೆರೆದಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಿ ಇಂತಹ ಕೃತ್ಯಗಳನ್ನು ಇನ್ನು ಜಿಲ್ಲೆಯಲ್ಲಿ ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲು ಗ್ರಾಮಸ್ಥರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರಿ, ಮನಪಾ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್ ಮತ್ತಿತರರಿದ್ದರು.

ಕೆಲದಿನಗಳ ಹಿಂದೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರಿನ ನಾಗನ ಕಟ್ಟೆಗೆ ಕಿಡಿಗೇಡಿಗಳು ಹಾನಿ ಎಸಗಿದ್ದರು.

- Advertisement -

Latest News

error: Content is protected !!