Monday, April 29, 2024
Homeಕರಾವಳಿಉಡುಪಿಕೊಡಚಾದ್ರಿ ಶಿಖರದಲ್ಲಿನ ಚಿತ್ರಮೂಲ, ಗಣಪತಿ ಗುಹೆ ಪ್ರವೇಶ ನಿರ್ಬಂಧ- ಸುಂಕ ವಸೂಲಿ ವಿರುದ್ಧ ಭುಗಿಲೆದ್ದ ಭಕ್ತರ...

ಕೊಡಚಾದ್ರಿ ಶಿಖರದಲ್ಲಿನ ಚಿತ್ರಮೂಲ, ಗಣಪತಿ ಗುಹೆ ಪ್ರವೇಶ ನಿರ್ಬಂಧ- ಸುಂಕ ವಸೂಲಿ ವಿರುದ್ಧ ಭುಗಿಲೆದ್ದ ಭಕ್ತರ ಆಕ್ರೋಶ!..

spot_img
- Advertisement -
- Advertisement -

ಕುಂದಾಪುರ: ಪ್ರವಾಸಿಗರ ನೆಚ್ಚಿನ ತಾಣ ಕೊಡಚಾದ್ರಿ ಶಿಖರದಲ್ಲಿನ ಚಿತ್ರಮೂಲ, ಗಣಪತಿ ಗುಹೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ವಿಷಯ ಪ್ರವಾಸಿಗರ ಮತ್ತು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಅಧಿಕಾರಿಗಳು ಕೊಡಚಾದ್ರಿ ಸಂರಕ್ಷಣೆಯ ಹಿತದೃಷ್ಟಿಯಿಂದ ಗುಹೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ಕೊಲ್ಲೂರು ಮೂಕಾಂಬಿಕೆಯ ಮೂಲಸ್ಥಾನ ಎಂದು ಕರೆಯಲ್ಪಡುವ ಕೊಡಚಾದ್ರಿ ಶಿಖರದಲ್ಲಿನ ಚಿತ್ರಮೂಲ, ಗಣಪತಿ ಗುಹೆ ಬಹಳಾ ಪ್ರಮುಖ ಸ್ಥಳ ಅಲ್ಲದೆ ಕೊಡಚಾದ್ರಿಗೆ ಬರುವ ಪ್ರತಿ ವ್ಯಕ್ತಿಯೂ ಚಿತ್ರಮೂಲ, ಗಣಪತಿ ಗುಹೆಗೆ ಭೇಟಿ ಮಾಡಲು ಬಯಸುತ್ತಾನೆ.ಆದರೆ ಈಗ ಚಿತ್ರಮೂಲ ಗುಹೆಯತ್ತ ತೆರಳದಂತೆ ದಾರಿಗೆ ಕಬ್ಬಿಣದ ತಡೆಬೇಲಿ ಅಳವಡಿಸಲಾಗಿದೆ.

ಈ ಹಿಂದಿನಿಂದ ಬೆಳೆದು ಬಂದ ನಂಬಿಕೆಯ ಪ್ರಕಾರ ಕೊಡಚಾದ್ರಿ ಗೆ ಬರುವ ಭಕ್ತರು ಕೊಡಚಾದ್ರಿಯಲ್ಲಿನ ಚಿತ್ರಮೂಲ ಗುಹೆ ದರ್ಶನ ಪಡೆದರೆ ಯಾತ್ರೆ ಪರಿಪೂರ್ಣ ಎಂದು ಹೇಳಲಾಗುತ್ತದೆ ಹೀಗಿರುವಾಗ ಅರಣ್ಯ ಇಲಾಖೆ ತಡೆಬೇಲಿ ಅಳವಡಿಸಿ ಧಾರ್ಮಿಕ ನಂಬಿಕೆ, ಶ್ರದ್ಧೆಗೆ ಧಕ್ಕೆ ಉಂಟುಮಾಡಿದೆ ಎಂದು ಭಕ್ತರು ಅರಣ್ಯ ಇಲಾಖೆಯ ನಡೆಯನ್ನು ಖಂಡಿಸಿದ್ದಾರೆ.

ಅರಣ್ಯ ಇಲಾಖೆ ಹೇಳುವ ಪ್ರಕಾರ ಕೊಡಚಾದ್ರಿ ಶಿಖರದಲ್ಲಿ ಸೂಕ್ಷ್ಮ ಜೀವವೈವಿಧ್ಯಗಳಿದ್ದು ಪರಿಸರ ಸೂಕ್ಷ್ಮ ಸ್ಥಳಗಳಲ್ಲಿ ಮೋಜು ಮಸ್ತಿ ಮಾಡುವುದರ ಪರಿಣಾಮ ಪರಿಸರ ಮಾಲಿನ್ಯ, ಅರಣ್ಯ ಮತ್ತು ವನ್ಯಜೀವಿಗಳಿಗೆ ಧಕ್ಕೆಯುಂಟಾಗುತ್ತಿರುವ ಕಾರಣ ಅವಶ್ಯಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಆದರೆ ಇಲ್ಲಿನ ಶಂಕರಾಚಾರ್ಯರ ತಪಸ್ಥಳ, ಸೌಪರ್ಣಿಕೆಯ ಉಗಮಸ್ಥಾನ, ಮೂಕಾಂಬಿಕೆಯ‌ ಮೂಲ ನೆಲೆ, ಚಿತ್ರ ಮೂಲ, ಹಾಗೂ ಅಂಬಾವನಕ್ಕೆ ಹೋಗುವ ದಾರಿಯ ಜೊತೆಗೆ ಗಣಪತಿ ಗುಹೆಗೆ ತೆರಳುವ ದಾರಿಯನ್ನು ಅರಣ್ಯ ಇಲಾಖೆ ಗೇಟ್ ಹಾಕಿ ಮುಚ್ಚಿಸಿದೆ. ಇದರಿಂದಾಗಿ ಕರ್ನಾಟಕ, ಕೇರಳ, ತಮಿಳುನಾಡಿನ ‌ವಿವಿಧ ಸ್ಥಳಗಳಿಂದ ಬರುವ ಭಕ್ತಾದಿಗಳಿಗೆ ಬೇಸರ ತಂದಿದ್ದು, ಸಾವಿರಾರು ಭಕ್ತರಿಗೆ, ಸಾದುಸಂತರಿಗೆ ಈ ಪುಣ್ಯ ಕ್ಷೇತ್ರದ ದರ್ಶನದಿಂದ ವಂಚಿತರಾಗುತ್ತಿದ್ದಾರೆ.ಅಲ್ಲದೆ ಸುಂಕ ವಸೂಲಿಗೆ ಇಳಿದಿದ್ದು ರಾಜ್ಯದ ಇತರ ಯಾವುದೇ ತೀರ್ಥ ಕ್ಷೇತ್ರಗಳಲ್ಲಿ ಇಲ್ಲದ ವ್ಯವಸ್ಥೆ ಕೊಡಚಾದ್ರಿಯಲ್ಲೇಕೆ? ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ.

ಇದರ ಬಗ್ಗೆ ‌ಸಂಭಂದಿಸಿದ ಇಲಾಖೆ, ಸರಕಾರ ತಕ್ಷಣ ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಚಾಲನೆ ನೀಡಲಾಗುವುದು. ಸದ್ಯದಲ್ಲಿಯೇ ಕೊಡಚಾದ್ರಿ ಚಲೋ ಹಾಗೂ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್‌ನ ಗೌರವಧ್ಯಕ್ಷ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ಅಧ್ಯಕ್ಷ ಕೆ‌‌.ಕೆ ಸಾಬು ತಿಳಿಸಿರುತ್ತಾರೆ.

- Advertisement -
spot_img

Latest News

error: Content is protected !!