- Advertisement -
- Advertisement -
ಮಂಗಳೂರು: ಕೆಎಂಎಫ್ ಉತ್ಪನ್ನಗಳ ಸಾಗಾಟದ ಲಾರಿ ಮಂಗಳೂರು ಹೊರವಲಯದ ಕಣ್ಣೂರು ಬಳಿ ಅಪಘಾತಕ್ಕೀಡಾಗಿದೆ.ನಿಯಂತ್ರಣ ಕಳೆದುಕೊಂಡಿದ್ದ ಕೆಎಂಎಫ್ ಉತ್ಪನ್ನ ಸಾಗಿಸುತ್ತಿದ್ದ ಲಾರಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದ್ದು, ಕ್ಯಾಬಿನ್ ಜಖಂಗೊಂಡು ಚಾಲಕನ ಕಾಲು ಸಿಕ್ಕಿಹಾಕಿಕೊಂಡಿತ್ತು.
ಇದೇ ವೇಳೆ ಮಂಗಳೂರಿನಿಂದ ಬಂಟ್ವಾಳಕ್ಕೆ ತೆರಳುತ್ತಿದ್ದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಸ್ಥಳೀಯರೊಂದಿಗೆ ಸೇರಿ ನಜ್ಜುಗುಜ್ಜಾದ ಕ್ಯಾಬಿನ್ ನ ಮುಂಭಾಗ ಎಳೆದು ಲಾರಿಯೊಳಗೆ ಸಿಲುಕಿಕೊಂಡಿದ್ದ ಚಾಲಕನ ರಕ್ಷಣೆಗೆ ನೆರವಾಗಿದ್ದಾರೆ.
ಅಪಘಾತದಿಂದಾಗಿ ಸಣ್ಣ ಪುಟ್ಟ ಗಾಯಗೊಂಡಿದ್ದ ಲಾರಿ ಚಾಲಕನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
- Advertisement -