- Advertisement -
- Advertisement -
ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕಾಲಿವುಡ್ ನಟ ವಿಶಾಲ್ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.
ಮೂಲ್ಕಿ ತಾಲೂಕಿನ ಹರಿಪಾದೆಯಲ್ಲಿ ಜಾರಂದಾಯ ದೈವದ ನೇಮದಲ್ಲಿ ಭಾಗಿಯಾದ ಬಳಿಕ ನಟ ವಿಶಾಲ್ ಕೊಲ್ಲೂರಿಗೆ ತೆರಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ವಿಶಾಲ್, ತಮ್ಮ ಆರೋಗ್ಯ ಸಮಸ್ಯೆ ಪರಿಹರಿಸುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಶಾಲು ಹೊದಿಸಿ ನಟ ವಿಶಾಲ್ ಅವರನ್ನು ದೇವಸ್ಥಾನದ ಆಡಳಿತ ಸಮಿತಿ ವತಿಯಿಂದ ಗೌರವಿಸಲಾಯಿತು.
- Advertisement -