Thursday, June 4, 2026
Homeತಾಜಾ ಸುದ್ದಿಜಿಹಾದಿಗಳ ಕಿರುಕುಳದಿಂದ ಆತ್ಮಹತ್ಯೆಯ ಮುಂದಾಗಿದ್ರಾ ಕಿರಿಕ್ ಕೀರ್ತಿ; ಫೇಸ್ ಬುಕ್ ನಲ್ಲಿ ಜೀವನದ ಕಹಿ ಘಟನೆಯ...

ಜಿಹಾದಿಗಳ ಕಿರುಕುಳದಿಂದ ಆತ್ಮಹತ್ಯೆಯ ಮುಂದಾಗಿದ್ರಾ ಕಿರಿಕ್ ಕೀರ್ತಿ; ಫೇಸ್ ಬುಕ್ ನಲ್ಲಿ ಜೀವನದ ಕಹಿ ಘಟನೆಯ ಬಗ್ಗೆ ಪೋಸ್ಟ್ ಮಾಡಿದ ಕೀರ್ತಿ

- Advertisement -
- Advertisement -

ಬೆಂಗಳೂರು; ಫೇಸ್ ಬುಕ್ ನಲ್ಲಿ ಸದ್ಯ ನಿರೂಪಕ, ಬಿಗ್ ಮಾಸ್ ಮಾಜಿ ಸ್ಪರ್ಧಿ, ಪತ್ರಕರ್ತ ಕಿರಿಕ್ ಕೀರ್ತಿ ಅವರ ಪೋಸ್ಟ್ ಒಂದು ಭಾರೀ ಸದ್ದು ಮಾಡುತ್ತಿದೆ. ಕಳೆದ ಕೆಲವು ಸಮಯಗಳಿಂದ ಸೋಷಿಯಲ್ ಮೀಡಿಯಾದಿಂದ ಕೊಂಚ ದೂರದಲ್ಲಿದ್ದ ಕೀರ್ತಿ ಇದೀಗ ಪೋಸ್ಟ್ ಒಂದನ್ನು ಮಾಡಿದ್ದಾರೆ.

ಅದರಲ್ಲಿ ಕೀರ್ತಿ ತನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಖಿನ್ನತೆಗೆ ಒಳಗಾಗಿದ್ದೆ ಎಂದಿದ್ದಾರೆ. ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬದ ನೆಮ್ಮದಿ ಕೆಡಿಸಿದ್ದವು ಎಂದು ಕಿರಿಕ್ ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ.

ಕಿರಿಕ್ ಕೀರ್ತಿ ಪೋಸ್ಟ್ ನಲ್ಲಿ ಏನಿದೆ?
ನಿರ್ಧಾರ ಮಾಡಿಬಿಟ್ಟಿದ್ದೆ…ಜಗತ್ತಿಗೆ ವಿದಾಯ ಹೇಳಿಬಿಡಬೇಕು ಅಂತ…ಕಾರಣಗಳು ಹಲವು…ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಗ್ಗಿಸಿತ್ತು… ಜೀವನದ ಮೇಲೊಂದು ಕೆಟ್ಟ ನಿರಾಸಕ್ತಿ ಬಂದಿತ್ತು… ಎಲ್ಲ ಪ್ರಯತ್ನಗಳೂ ಕೈಕೊಡ್ತಿತ್ತು… ಒಂದು ಕಡೆ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ಡಿಸ್ಟರ್ಬ್ ಮಾಡಿತ್ತು… ಸೋಷಿಯಲ್ ಮೀಡಿಯಾದಿಂದಲೂ ಸ್ವಲ್ಪ ದೂರವೇ ಇದ್ದೆ… ಆದ್ರೆ ಈಗ ಎಲ್ಲದಕ್ಕೂ ಹೆದರಿ ಹೋಗಿಬಿಟ್ರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಕೊಡೋದು ಹೇಗೆ..? ನನ್ನ ನಂಬಿ ಇನ್ವೆಸ್ಟ್ ಮಾಡಿರೋರಿಗೆ ನ್ಯಾಯ ಸಿಗೋದು ಹೇಗೆ…? ನನ್ನ ಮಗನ ಭವಿಷ್ಯ ಕಟ್ಟೋದು ಹೇಗೆ..? ಈ ಪ್ರಶ್ನೆಗಳು ಕಾಡಿದ್ವು…ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡ್ದೆ.. 10 ನಿಮಿಷ ಧ್ಯಾನ ಮಾಡ್ದೆ… ತಡವಾದ್ರೂ ಪರವಾಗಿಲ್ಲ ನನ್ನ ನಂಬಿದ ಎಲ್ಲರಿಗೂ ಅವರಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋ ಹಾಗೆ ಸಾಧಿಸಬೇಕು ಅಂತ ಡಿಸೈಡ್ ಮಾಡ್ದೆ… ಮನಸ್ಸಲ್ಲಿದ್ದ ಕೆಟ್ಟ ಅಲೋಚನೆಗಳನ್ನು ಕಿತ್ತು ಬಿಸಾಕಿದ್ದೇನೆ…ಕೆಲವರನ್ನು ಕಳೆದುಕೊಂಡಿದ್ದರ ಹೊರತು ಬೇರೆ ಎಲ್ಲವನ್ನೂ ಟ್ರ್ಯಾಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ…ನಿಮ್ಮ ಬೆಂಬಲ‌ ಜೊತೆಗಿರಲಿ… ಡಿಪ್ರೆಷನ್‌ನಿಂದ ಮತ್ತೆ ವಾಪಾಸ್ ಬರಲು ಸಹಕರಿಸಿ… ಮತ್ತೆ ನನ್ನ ಮುಖದ ಮೇಲಿನ ನಗು ವಾಪಾಸ್ ತರುವ ತನಕ ಪ್ರಯತ್ನ‌ ನಿರಂತರ… ಇದು ಹೇಳಿಕೊಳ್ಳಬಾರದ ವಿಷಯ.. ಆದ್ರೆ ಹೇಳಿಕೊಂಡರಷ್ಟೆ ಸಮಾಧಾನ…

ಹೀಗಂಥಾ ಕಿರಿಕ್ ಕೀರ್ತಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಅನೇಕರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಅಲ್ಲದೇ ಅವರು ಬೇಗನೇ ಮೊದಲಿನಂತಾಗಲಿ ಎಂದು ಶುಭ ಹಾರೈಸಿದ್ದಾರೆ.

- Advertisement -

Latest News

error: Content is protected !!