Thursday, June 4, 2026
Homeಕರಾವಳಿಬೆಳ್ತಂಗಡಿ:ಮನೆಯಂಗಳದಲ್ಲಿ ತೆಂಗಿನಕಾಯಿ ರಾಶಿಯೊಳಗೆ ಸೇರಿದ್ದ ಕಾಳಿಂಗ ಸರ್ಪ ಸೆರೆ

ಬೆಳ್ತಂಗಡಿ:ಮನೆಯಂಗಳದಲ್ಲಿ ತೆಂಗಿನಕಾಯಿ ರಾಶಿಯೊಳಗೆ ಸೇರಿದ್ದ ಕಾಳಿಂಗ ಸರ್ಪ ಸೆರೆ

- Advertisement -
- Advertisement -

ಬೆಳ್ತಂಗಡಿ: ಮನೆಯಂಗಳದಲ್ಲಿದ್ದ ತೆಂಗಿನಕಾಯಿಯ ರಾಶಿಯಲ್ಲಿ ಸೇರಿಕೊಂಡಿದ್ದ ಕಾಳಿಂಗ ಸರ್ಪವೊಂದನ್ನು ಬೆಳ್ತಂಗಡಿ ತಾಲೂಕಿನಲ್ಲಿ ಸೆರೆ ಹಿಡಿಯಲಾಗಿದೆ.

ಮೇಲಂತಬೆಟ್ಟು ಗ್ರಾಮದ ಗರಡಿ ಎಂಬಲ್ಲಿ ದಯಾನಂದ ಎಂಬವರ ಮನೆಯ ಅಂಗಳದಲ್ಲಿ ಹಾಕಿದ್ದ ತೆಂಗಿನಕಾಯಿ ರಾಶಿಯೊಳಗೆ ಕಾಳಿಂಗ ಸರ್ಪ ಸೇರಿಕೊಂಡಿತ್ತು.

ತೆಂಗಿನಕಾಯಿ ರಾಶಿಯೊಳಗೆ ಕಾಳಿಂಗ ಸರ್ಪ ಹೋಗಿರುವುದನ್ನು ಗಮನಿಸಿದ್ದ ಮನೆಯವರು ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ನೀಡಿದ್ದರು.

ಬಳಿಕ ಸ್ಥಳಕ್ಕೆ ಬಂದ ಸ್ನೇಕ್ ಅಶೋಕ್ ಸುಮಾರು 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ‌.

- Advertisement -

Latest News

error: Content is protected !!