Wednesday, June 3, 2026
Homeತಾಜಾ ಸುದ್ದಿಮುಕಾಬುಲಾ ಹಾಡಿಗೆ ಪಿಪಿಇ ಕಿಟ್‌ನಲ್ಲೇ ಸಕತ್ ಸ್ಟೆಪ್ಸ್ ಹಾಕಿದ ಕಿಮ್ಸ್ ವೈದ್ಯ ರಂಗ ದೊರೈ

ಮುಕಾಬುಲಾ ಹಾಡಿಗೆ ಪಿಪಿಇ ಕಿಟ್‌ನಲ್ಲೇ ಸಕತ್ ಸ್ಟೆಪ್ಸ್ ಹಾಕಿದ ಕಿಮ್ಸ್ ವೈದ್ಯ ರಂಗ ದೊರೈ

- Advertisement -
- Advertisement -

ಬೆಂಗಳೂರು : ಕೊರೊನಾದಿಂದಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಪಾಡು ಹೇಗಿದೆ ಅಂತಾ ನಿಮಗೆಲ್ಲಾ ಗೊತ್ತೇ ಇದೆ. ಊಟ ತಿಂಡಿ ನಿದ್ದೆ ಇದ್ಯಾವುದಕ್ಕೂ ಸಮಯವೇ ಇಲ್ಲ ಎಂಬಂತಾಗಿದೆ ಅವರ ಪಾಡು. ಇದೆಲ್ಲದರ ಮಧ್ಯೆ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳೋದಕ್ಕೆ ವೈದ್ಯಕೀಯ ಸಿಬ್ಬಂದಿ ಹಾಡು, ಡ್ಯಾನ್ಸ್ ನ ಮೊರೆ ಹೋಗುತ್ತಿದ್ದಾರೆ.

ಇದೀಗ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಅಸಿಸ್ಟೆಂಟ್ ಪ್ರೊಫೆಸರ್ ಡಾ.ರಂಗ ದೊರೈ ಅವರು ಕೆಲಸದ ಒತ್ತಡದ ಮಧ್ಯೆಯೇ ಡ್ಯಾನ್ಸ್ ಮಾಡಿ ರಿಲ್ಯಾಕ್ಸ್‌ ಆಗಿದ್ದಾರೆ. ಪಿಪಿಇ ಕಿಟ್ ನಲ್ಲಿ ವೈದ್ಯರು ಮುಕಾಬುಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೂರು ನಿಮಿಷಗಳ ಕಾಲ ಸಖತ್ತಾಗಿ ಡ್ಯಾನ್ಸ್ ಮಾಡಿದ್ದಾರೆ ಈ ಡಾಕ್ಟರ್. ಡಾ.ರಂಗ ದೊರೈ ಡ್ಯಾನ್ಸ್ ಇದೀಗ ಫುಲ್ ವೈರಲ್ ಆಗಿದೆ.

- Advertisement -

Latest News

error: Content is protected !!