Monday, June 8, 2026
Homeತಾಜಾ ಸುದ್ದಿದೆಹಲಿಯಲ್ಲಿ ರೈತರ ಪ್ರತಿಭಟನೆ-ರೈತರ ಬೆಂಬಲಕ್ಕೆ ನಿಂತ ವೃತ್ತಿಪರ ಕುಸ್ತಿಪಟು ಖಲಿ

ದೆಹಲಿಯಲ್ಲಿ ರೈತರ ಪ್ರತಿಭಟನೆ-ರೈತರ ಬೆಂಬಲಕ್ಕೆ ನಿಂತ ವೃತ್ತಿಪರ ಕುಸ್ತಿಪಟು ಖಲಿ

- Advertisement -
- Advertisement -

ನವದೆಹಲಿ :ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಗಳನ್ನು ರದ್ದುಮಾಡಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ರೈತರ ಪ್ರತಿಭಟನೆ ತಾರಕಕ್ಕೇರಿದೆ. ಸಾವಿರಾರು ರೈತರು ಪಂಜಾಬ್ ಮತ್ತು ಹರಿಯಾಣಾ ದಿಂದ ಆಗಮಿಸಿದ್ದು ಸಾವಿರಾರು ರೈತರನ್ನು ಬೆಂಬಲಿಸಲು ವೃತ್ತಿಪರ ಕುಸ್ತಿಪಟು ದಲಿಪ್ ಸಿಂಗ್ ರಾಣಾ ಖಲಿ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹೇಳಿಕೆ ನೀಡಿರುವ ರಾಣಾ, ದೇಶದ ಜನರು ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ವಿಡಿಯೋದಲ್ಲಿ ” ದಿನಗೂಲಿ ನೌಕರರು, ರಸ್ತೆ ಬದಿ ವ್ಯಾಪಾರಿಗಳಿಗೆ ಈ ಕಾನೂನುಗಳು ಮಾರಕವಾಗಲಿದೆ. ಮತ್ತು ಸಾಮಾನ್ಯ ಜನರು ತೊಂದರೆಅನುಭವಿಸುತ್ತಾರೆ. ರೈತರ ನೆರವಿಗೆ ಎಲ್ಲರೂ ಮನವಿ ಮಾಡುತ್ತೇನೆ’ ಎಂದು ಕೇಳಿಕೊಂಡಿದ್ದಾರೆ.

- Advertisement -

Latest News

error: Content is protected !!