Wednesday, June 26, 2024
Homeತಾಜಾ ಸುದ್ದಿವೇಣೂರು: ಮರೋಡಿಯಲ್ಲಿ ಆಟಿಡೊಂಜಿ ಕೆಸರ್‍ದ ಕೂಟ ಸಂಭ್ರಮ: ಮಣ್ಣಿನ ಕ್ರೀಡೆಯನ್ನು ಪ್ರೋತ್ಸಾಹಿಸಲು ಶಾಸಕ ಹರೀಶ್ ಪೂಂಜ...

ವೇಣೂರು: ಮರೋಡಿಯಲ್ಲಿ ಆಟಿಡೊಂಜಿ ಕೆಸರ್‍ದ ಕೂಟ ಸಂಭ್ರಮ: ಮಣ್ಣಿನ ಕ್ರೀಡೆಯನ್ನು ಪ್ರೋತ್ಸಾಹಿಸಲು ಶಾಸಕ ಹರೀಶ್ ಪೂಂಜ ಕರೆ

spot_img
- Advertisement -
- Advertisement -

ವೇಣೂರು: ಮರೋಡಿ ಅರುಣೋದಯ ಯುವಕ ಮಂಡಲದ ಆಶ್ರಯದಲ್ಲಿ ಆಟಿಡೊಂಜಿ ಕೆಸರ್‍ದ ಕೂಟ ಕಾರ್ಯಕ್ರಮವು ಮರೋಡಿಯ ಬೊವೂರಿ ಜಯ ಪೂಜಾರಿಯವರ ಗದ್ದೆಯಲ್ಲಿ ನಿನ್ನೆ ನಡೆಯಿತು.

ಶಾಸಕ ಹರೀಶ್ ಪೂಂಜ ಕ್ರೀಡಾಕೂಟವನ್ನು ಉದ್ಘಾಟಿಸಿ, ನಮ್ಮ ಮಣ್ಣಿನ ಕ್ರೀಡೆಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು. ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ತೊಡಗಿಕೊಂಡಿರುವ ಯುವಕ ಮಂಡಲದ ಕಾರ್ಯವನ್ನು ಶ್ಲಾಘಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿ, ಯುವಕ ಮಂಡಲದ ಮೂಲಕ ನಮ್ಮ ಹಿಂದಿನ ಆಚರಣೆಗಳನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಶ್ರೀ ಜೈನ್, ಉಪಾಧ್ಯಕ್ಷ ಯಶೋಧರ ಆಚಾರ್ಯ, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಫಕೀರಬ್ಬ ಎಂ., ಗ್ರಾಮ ಪಂಚಾಯಿತಿ ರತ್ನಾಕರ ಬುಣ್ಣನ್, ಮೂಡುಬಿದಿರೆ ಸುವಿಧ್ ಬಜಾಜ್‌ನ ಸನ್ನತ್ ಸುವರ್ಣ, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ  ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ಶಿರ್ತಾಡಿ ಪ್ರಭಾ ಕ್ಲಿನಿಕ್‌ನ ಡಾ.ಆಶೀರ್ವಾದ್, ಯುವಕ ಮಂಡಲದ ಕಾರ್ಯದರ್ಶಿ ಅರಹಂತ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಅರುಣೋದಯ ಯುವಕ ಮಂಡಲದ ಅಧ್ಯಕ್ಷ ನವೀನ್ ಕೋಟ್ಯಾನ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಬಾಲಕೃಷ್ಣ ಬಂಗೇರ ವಂದಿಸಿದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.

ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಿತು. ನವೀನ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ನಾರಾವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉದಯ ಹೆಗ್ಡೆ, ಮರೋಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ್ ಸಾಲ್ಯಾನ್, ಅಶೋಕ್ ಕೋಟ್ಯಾನ್, ಶುಭರಾಜ್ ಹೆಗ್ಡೆ, ಯಶೋಧಾ, ಪ್ರಮುಖರಾದ ವಿನೀತ್ ಕೋಟ್ಯಾನ್, ಗುರುಪ್ರಸಾದ್, ಅಹಮ್ಮದ್ ಬಾವ, ಉಮೇಶ್ ಕುಲಾಲ್, ರಾಘವ ಬಂಗೇರ, ಸಂತೋಷ್ ದೇವಾಡಿಗ, ಉಮೇಶ್ ಸಾಲ್ಯಾನ್ ಉಪಸ್ಥಿತರಿದ್ದರು. ಯಶೋಧರ ಬಂಗೇರ ನಿರೂಪಿಸಿದರು.

- Advertisement -
spot_img

Latest News

error: Content is protected !!