Wednesday, October 14, 2026
Homeಕರಾವಳಿಬಜ್ಪೆ ಮೊಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಮಸೂದ್ ಕುಟುಂಬಕ್ಕೆ ಪರಿಹಾರ

ಬಜ್ಪೆ ಮೊಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಮಸೂದ್ ಕುಟುಂಬಕ್ಕೆ ಪರಿಹಾರ

- Advertisement -
- Advertisement -

ಮಂಗಳೂರು : ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಳ್ಯದ ಕಳಂಜ ನಿವಾಸಿ ಮಸೂದ್ ಕುಟುಂಬಕ್ಕೆ ಬಜ್ಪೆ ಮೊಹಿಯುದ್ದೀನ್ ಜುಮಾ ಮಸೀದಿ ವತಿಯಿಂದ 1.25 ಲಕ್ಷ ರೂ. ಪರಿಹಾರ ವಿತರಿಸಿದ್ರು.

ಬಜ್ಪೆ ಮೊಹಿಯುದ್ದೀನ್ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಹುಸೇನ್ ಸಿರಾಜ್ ನೇತೃತ್ವದಲ್ಲಿ ಮಸೂದ್ ಮನೆಗೆ ತೆರಳಿದ ಬಜ್ಪೆ ಜಮಾಅತ್ ನಿಯೋಗವು ಮಸೂದ್ ಕುಟುಂಬಕ್ಕೆ ಪರಿಹಾರ ಹಸ್ತಾಂತರಿಸಿ ಸಾಂತ್ವನ ಹೇಳಿತು.

ಪರಿಹಾರ ನಿಧಿಗೆ ಸಹಕರಿಸಿದ ಜಮಾಅತಿಗರಿಗೆ ಹಾಗೂ ಸ್ಥಳೀಯ ಮಸೀದಿಗಳ ದಾನಿಗಳಿಗೆ ಕೃತಜ್ಞತೆಯನ್ನು ಅರ್ಪಿಸಿದರು. ನಿಯೋಗದಲ್ಲಿ ಉಪ ಕಾರ್ಯದರ್ಶಿ ಅಜ್ಮಲ್ ಅಲಿ, ಇಬ್ರಾಹಿಂ ಮತ್ತು ಸರ್ಫರಾಝ್ ಬಜ್ಪೆ ಉಪಸ್ಥಿತರಿದ್ದರು. ಕೊಲೆಯಾದ ಫಾಝಿಲ್‌ ಕುಟುಂಬಕ್ಕೂ ಇದೇ ಜಮಾತಿನಿಂದ ಪರಿಹಾರ ನಿಧಿ ವಿತರಿಸಲಾಗಿದೆ.

- Advertisement -

Latest News

error: Content is protected !!