Tuesday, April 30, 2024
HomeWorldಉಕ್ರೇನ್ ನಿಂದ ತನ್ನ ಮುದ್ದಿನ ನಾಯಿಯನ್ನು ತಾಯ್ನಾಡಿಗೆ ತರಲು ಹರಸಾಹಸ: ಕಣ್ಣಾಲಿ ತೇವಗೊಳಿಸುತ್ತೆ ಕೇರಳದ ಈ...

ಉಕ್ರೇನ್ ನಿಂದ ತನ್ನ ಮುದ್ದಿನ ನಾಯಿಯನ್ನು ತಾಯ್ನಾಡಿಗೆ ತರಲು ಹರಸಾಹಸ: ಕಣ್ಣಾಲಿ ತೇವಗೊಳಿಸುತ್ತೆ ಕೇರಳದ ಈ ಹುಡುಗಿಯ ಕಹಾನಿ

spot_img
- Advertisement -
- Advertisement -

ಕೇರಳ:  ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮರಳಿ ತಾಯ್ನಾಡಿಗೆ ಬರಲು ಹರಸಾಹಸ ಪಡುತ್ತಿದ್ದರೆ ಕೇರಳದ ವಿದ್ಯಾರ್ಥಿನಿಯೊಬ್ಬಳು ತಾನು ಅಪಾಯದಲ್ಲಿದ್ದರು ತನ್ನ ಮುದ್ದಿನ ನಾಯಿಮರಿಯನ್ನು ತಾಯ್ನಾಡಿಗೆ ತರೋದಕ್ಕೆ ಹರಸಾಹಸವನ್ನೇ ಮಾಡಿದ್ದಾಳೆ.

ಉಕ್ರೇನಿನಲ್ಲಿ ಮೆಡಿಕಲ್ ವ್ಯಾಸಂಗ ಮಾಡ್ತಿರುವ ಕೇರಳದ ವಿದ್ಯಾರ್ಥಿನಿ ಆರ್ಯಾ ಆಲ್ಡ್ರಿನ್, ತನ್ನ ಪ್ರೀತಿಯ 5 ತಿಂಗಳ ಸೈಬೀರಿಯನ್ ಪಪ್ಪಿ-ಮುದ್ದು ಝೈರಾನನ್ನೂ ತನ್ನೊಂದಿಗೇ ತಾಯ್ನಾಡಿಗೆ ತರೋದಕ್ಕೆ ಅಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದಾಳೆ. ಆದರೆ ಹೇಗಾದ್ರೂ ತನ್ನ ಮುದ್ದಿನ ನಾಯಿಯನ್ನು ಕರೆದೊಯ್ಯಲೇ ಬೇಕು ಎಂದು ಪಣ ತೊಟ್ಟ ಆಕೆ

ಅದಕ್ಕೆ ಬೇಕಾದ ಎಲ್ಲ ದಾಖಲೆ ಪತ್ರ ಸಿದ್ಧಗೊಳಿಸಿದ್ದಾಳೆ. ಎರಡು ದಿನಗಳ ಕಾಲ ಮೈಕೊರೆವ ಚಳಿಯಲ್ಲೂ 20 ಕಿ.ಮೀ ನಡೆಯುತ್ತಾ ರೊಮೇನಿಯಾ ವಿಮಾನ ನಿಲ್ದಾಣ ತಲುಪಿದ್ದಾಳೆ.

ಇನ್ನೇನು, ಒಂದೆರಡು ದಿನದಲ್ಲಿ ಆಕೆ ತಾಯ್ನಾಡನ್ನೂ ತಲುಪಬಹುದು.ಆದರೆ ಎಂತಹ ಕಡು ಕಷ್ಟದ ಸಂದರ್ಭದಲ್ಲೂ ತನ್ನ ಪ್ರೀತಿಯ ಝೈರಾನ ಕೈಬಿಡದೆ ಎದೆಗಂಟಿಸಿಕೊಂಡೇ ಕರೆತಂದ ಆರ್ಯಾಳ ಅಂತ:ಕರಣ, ಹೃದಯವಂತಿಕೆಗೊಂದು ಹ್ಯಾಟ್ಸಾಫ್ ಹೇಳಲೇ ಬೇಕು..

- Advertisement -
spot_img

Latest News

error: Content is protected !!