Thursday, June 4, 2026
Homeಕರಾವಳಿಶಾರ್ಜಾದಲ್ಲಿ ಅಪಘಾತವಾಗಿ ಕೇರಳ ಮೂಲದ ನರ್ಸ್ ಸಾವು

ಶಾರ್ಜಾದಲ್ಲಿ ಅಪಘಾತವಾಗಿ ಕೇರಳ ಮೂಲದ ನರ್ಸ್ ಸಾವು

- Advertisement -
- Advertisement -

ನ್ಯೂಸ್ ಡೆಸ್ಕ್ : ಶಾರ್ಜಾದಲ್ಲಿ ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಕೇರಳದ ನರ್ಸ್ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೇರಳದ ಕೊಟ್ಟಾಯಂನ ನೆಡುಂಕುನ್ನಂ ಮೂಲದ ಚಿಂಚು ಜೋಸೆಫ್ ಗುರುವಾರ ಸಂಜೆ ಅಲ್ ನಹ್ದಾ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕೂಡಲೇ ಆಕೆಯನ್ನು ಶಾರ್ಜಾದ ಅಲ್ ಖಾಸಿಮಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ನಂತರ ಮೃತಪಟ್ಟಿದ್ದಾಳೆ.

ಚಿಂಚು ಅವರಿಗೆ 28 ​​ವರ್ಷ. ಅವರು ಶಾರ್ಜಾದ ಆಸ್ಟರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು, ಆಕೆಯ ಕುಟುಂಬ – ಆಕೆಯ ಪೋಷಕರು, ಪತಿ ಮತ್ತು ನಾಲ್ಕು ವರ್ಷದ ಮಗಳು – ಕೇರಳದಲ್ಲಿ ವಾಸಿಸುತ್ತಿದ್ದಾರೆ.ಆಕೆಯ ಪಾರ್ಥಿವ ಶರೀರವನ್ನು ಶುಕ್ರವಾರ ದುಬೈನಿಂದ ಕೇರಳದ ಕೊಚ್ಚಿಗೆ ವಿಮಾನದಲ್ಲಿ ಮನೆಗೆ ತರಲಾಯಿತು.

- Advertisement -

Latest News

error: Content is protected !!