Wednesday, October 14, 2026
Homeಕರಾವಳಿಉಜಿರೆಯಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ : ಜಗಳ ಬಿಡಿಸಲು ಹೋದ ಮೂವರ ಮೇಲೆ ಹಲ್ಲೆ...

ಉಜಿರೆಯಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ : ಜಗಳ ಬಿಡಿಸಲು ಹೋದ ಮೂವರ ಮೇಲೆ ಹಲ್ಲೆ ,ಓರ್ವನ ಸ್ಥಿತಿ ಗಂಭೀರ

- Advertisement -
- Advertisement -

ಬೆಳ್ತಂಗಡಿ : ಆಟವಾಡುತ್ತಿದ್ದ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯಾಗಿದ್ದ ವಿಚಾರ ತಿಳಿದು ಹೊರಗಿನ ವ್ಯಕ್ತಿಗಳು ಗಲಾಟೆ ಬಿಡಿಸಲು ಬಂದಾಗ ಅವರಿಗೂ ಹಲ್ಲೆ ಮಾಡಿದ ಘಟನೆ ಉಜಿರೆಯಲ್ಲಿ ನಡೆದಿದೆ.

ಉಜಿರೆ ಶಾಂತಯ್ಯ ಎಂಬ ವಿದ್ಯಾರ್ಥಿ ಮತ್ತು ಇನ್ನೊಂದು ಗುಂಪಿನ ನಡುವೆ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ನಡೆದಿದ್ದು ಈ ವೇಳೆ ಗಲಾಟೆ ವಿಚಾರ ತಿಳಿದು ಬಿಡಿಸಲು ಬಂದ ಆಟೋ ಚಾಲಕರಿಬ್ಬರಿಗೆ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ಹಲ್ಲೆ ಮಾಡಿ ಕೆಳಗೆ ಹಾಕಿ ಕಾಲಿನಿಂದ ಒದ್ದು ಗಂಭೀರ ಹಲ್ಲೆ ಮಾಡಲಾಗಿದೆ ತಕ್ಷಣ ಗಾಯಗೊಂಡವರು 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ತಕ್ಷಣ ಸ್ಥಳಕ್ಕೆ ಬಂದು ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉಜಿರೆ ಆಟೋ ಚಾಲಕ ಪ್ರಜ್ವಲ್ ಗೌಡ.ಕೆ.ವಿ ಎಂಬಾತನ ಮುಖ ಹಾಗೂ ಸೋಂಟಕ್ಕೆ ಕಾಲಿನಿಂದ ಹಲ್ಲೆ ಮಾಡಿದ್ದು ಗಂಭೀರ ಹಲ್ಲೆಯಿಂದ ಉಜಿರೆ ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಜೊತೆಯಲ್ಲಿದ್ದ ಆಟೋ ಚಾಲಕ ಪೆರ್ಲದ ಜಗದೀಶ್(26) ಮತ್ತು ಡಿಗ್ರಿ ಕಾಲೇಜ್ ಪ್ರಥಮ ವರ್ಷದ ವಿದ್ಯಾರ್ಥಿ ಶಾಂತಯ್ಯ(18)ಗೆ ಸಣ್ಣಪುಟ್ಟ ಗಾಯವಾಗಿದೆ ಇವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದು ತಂಡದ ವಿದ್ಯಾರ್ಥಿಗಳಿಗೂ ಹಲ್ಲೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದು. ಘಟನೆ ಸಂಬಂಧ ಕೆಲವು ವಿದ್ಯಾರ್ಥಿಗಳನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!