Tuesday, May 14, 2024
Homeಕರಾವಳಿಕಾಸರಗೋಡುಕೇರಳದ ಬಿಎಸ್ಸಿ ವಿದ್ಯಾರ್ಥಿನಿ ದೇಶದ ಕಿರಿಯ ಮೇಯರ್...

ಕೇರಳದ ಬಿಎಸ್ಸಿ ವಿದ್ಯಾರ್ಥಿನಿ ದೇಶದ ಕಿರಿಯ ಮೇಯರ್…

spot_img
- Advertisement -
- Advertisement -

ಕೇರಳ:  ಇಲ್ಲಿನ ತಿರುವನಂತಪುರಂ ನಗರದ 21 ವರ್ಷದ ಆರ್ಯ ರಾಜೇಂದ್ರನ್  ದೇಶದ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸದ ಪ್ರವೇಶ ಮಾಡಿದ್ದಾರೆ . ಈ ಕಾಲೇಜು ಹೋಗುವ ಹುಡುಗಿ, ಈ ಮೇಯರ್‌ ಸ್ಥಾನವನ್ನು ವಹಿಸಿಕೊಂಡ ನಂತರ ದೇಶದ ಅತ್ಯಂತ ಕಿರಿಯ ಮೇಯರ್ ಆಗಲಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಆರ್ಯ ಅವರನ್ನು ಮೇಯರ್ ಆಗಿ ನೇಮಿಸುವ ನಿರ್ಧಾರವನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿಗಳ ಸಮಿತಿ ತೆಗೆದುಕೊಂಡಿದೆ. ಇತ್ತೀಚೆಗೆ ನಡೆದ ಕೇರಳ ನಾಗರಿಕ ಸಂಸ್ಥೆ ಚುನಾವಣೆಯಲ್ಲೂ ಸ್ಪರ್ಧಿಸಿ, ಮುದವನಮುಗಳ್ ನಿಂದ ವಾರ್ಡ್ ಕೌನ್ಸಿಲರ್ ಆಗಿ ಆಯ್ಕೆಯಾದರು.

ಈ ಬಗ್ಗೆ ಮಾತನಾಡಿದ ಆರ್ಯ, ತಮ್ಮ ರಾಜಕೀಯ ಕೆಲಸಗಳ ಜತೆಗೆ ಶಿಕ್ಷಣ ವನ್ನು ಪೂರ್ಣಗೊಳಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.ನಾಗರಿಕ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವ ಮುನ್ನ, ಆರ್ಯ ತನ್ನ ಇತರ ಅಭಿವೃದ್ಧಿ ಕಾರ್ಯಗಳ ಜೊತೆಗೆ ಕೆಳಹಂತದ ಪ್ರಾಥಮಿಕ ಶಾಲೆಗಳನ್ನು ಸುಧಾರಿಸುವ/ಉನ್ನತೀಕರಿಸುವತ್ತ ಗಮನ ಹರಿಸಲಾಗುವುದು ಎಂದು ಹೇಳಿದ್ದರು. ಆರ್ಯ ಸದ್ಯ ತಿರುವನಂತಪುರದ ಆಲ್ ಸಂತ ಕಾಲೇಜಿನಲ್ಲಿ ಗಣಿತದಲ್ಲಿ ಬಿಎಸ್ಸಿ ಓದುತ್ತಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಅವರು, ಭಾರತೀಯ ವಿದ್ಯಾರ್ಥಿ ಫೆಡರೇಷನ್ ನ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ. ಅಷ್ಟೇ ಅಲ್ಲ, ಸಿಪಿಎಂ ನ ಮಕ್ಕಳ ಘಟಕವಾದ ಬಾಲಸಂಘದ ಕೇರಳ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದಾರೆ.

- Advertisement -
spot_img

Latest News

error: Content is protected !!