Monday, May 6, 2024
Homeಜ್ಯೋತಿಷ್ಯಶನಿವಾರದ ನಿತ್ಯಭವಿಷ್ಯ: ಈ ದಿನದ ರಾಶಿಫಲದೊಂದಿಗೆ ಅದೃಷ್ಟದ ಬಣ್ಣ, ಅದೃಷ್ಟದ ಸಂಖ್ಯೆ ಮತ್ತು ಶುಭ ಸಮಯದ...

ಶನಿವಾರದ ನಿತ್ಯಭವಿಷ್ಯ: ಈ ದಿನದ ರಾಶಿಫಲದೊಂದಿಗೆ ಅದೃಷ್ಟದ ಬಣ್ಣ, ಅದೃಷ್ಟದ ಸಂಖ್ಯೆ ಮತ್ತು ಶುಭ ಸಮಯದ ಸಂಪೂರ್ಣ ಚಿತ್ರಣ

spot_img
- Advertisement -
- Advertisement -

ಮೇಷ ರಾಶಿ
ತೀವ್ರ ಗಾಬರಿ ಹುಟ್ಟಿಸಿದ್ದ ಅನಾರೋಗ್ಯವು ಇಳಿಮುಖವಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಬಹಳ ಚುರುಕಾಗಿ ಕೆಲಸ ಕಾರ್ಯಗಳನ್ನು ಮಾಡುವಿರಿ. ಕೆಲಸದಲ್ಲಿ ಸಂಭವಿಸುವ ದೌರ್ಜನ್ಯ ಅದು ನಿಮಗೆ ಮುಂದಿನ ಭವಿಷ್ಯದಲ್ಲಿ ಪ್ರಜ್ವಲ ಶಕ್ತಿ ನೀಡುತ್ತದೆ. ವಾಹನ ಚಲಾವಣೆ ಮಾಡುವಾಗ ಜಾಗೃತೆಯಿರಲಿ. ವಾಹನ ಚಲಿಸುವಾಗ ಹತ್ತುವುದು ಇಳಿಯುವುದು ಮಾಡಬೇಡಿ. ರೆಫ್ರಿಜಿರೇಟರ್ ಪರೀಕ್ಷಿಸಿ. ಗ್ಯಾಸ್ ಸಿಲೆಂಡರ್ ಪರೀಕ್ಷಿಸಿ ಮಲಗೋದು ಹವ್ಯಾಸ ಮಾಡಿಕೊಳ್ಳಿ.
ಕೇಸರಿ ವರ್ಣದ ವಸ್ತ್ರ ಧರಿಸಿದರೆ ಶುಭವಾಗುವುದು.
ಶುಭ ಸಮಯ ಸಂಜೆ.
ಅದೃಷ್ಟ ಸಂಖ್ಯೆ: 2

ವೃಷಭ ರಾಶಿ
ಹೊಸ ಆಶಾಕಿರಣ ಮೂಡಲಿದೆ. ಬದುಕಿಗೊಂದು ನಿಶ್ಚಿತ ಆಸರೆಯನ್ನು ಹೊಂದುವಿರಿ. ಉತ್ತಮ ಗುಣದಿಂದಾಗಿ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಕಂಡುಬರುತ್ತದೆ. ನಿಮ್ಮ ಮೃದು ಸ್ವಭಾವ ನಿಮಗೆ ಮುಜುಗುರ ಮಾಡಲಿದೆ. ಸಂಗಾತಿಯೊಡನೆ ಆಹ್ಲಾದಕರ ಮನಸ್ಥಿತಿಯಲ್ಲಿ ಕೇಳಿರುತ್ತೀರಿ. ಉದ್ದಿಮೆಗಳು ಯೋಚಿಸಿ ಹಣ ಹೂಡಿಕೆ ಮಾಡುವ ಅಗತ್ಯವಿದೆ. ಪತ್ನಿಯ ವ್ಯವಹಾರಗಳಲ್ಲಿ ನಿಮ್ಮ ಹಸ್ತಕ್ಷೇಪದಿಂದ ತೊಂದರೆ. ನಿಮ್ಮ ವೈವಾಹಿಕ ಜೀವನಕ್ಕೆ ತೊಂದರೆ ಸಂಭವ. ಸಮಾಜಸೇವಕರು ನಿಮ್ಮ ಕೆಲಸಕ್ಕೆ ಜನ ಗುರುತಿಸುತ್ತಾರೆ ಹಾಗೂ ಬೆಂಬಲ ಸಿಗುವುದು. ನೆರೆಹೊರೆಯವರ ಸಹಾಯದಿಂದ ನಿಮ್ಮ ಕಷ್ಟ ದೂರವಾಗಲಿದೆ.
ಹರಿಶಿಣ ವರ್ಣದ ಬಟ್ಟೆ ಧರಿಸಿದರೆ ಶುಭ.
ಶುಭ ಸಮಯ ಬೆಳಗ್ಗೆ
ಅದೃಷ್ಟ ಸಂಖ್ಯೆ: 4

ಮಿಥುನ ರಾಶಿ
ಸಮಾಜದ ಸರ್ವತೋಮುಖ ಪ್ರಗತಿಗಾಗಿ ಉತ್ತಮ ಮಾರ್ಗದರ್ಶನ ಮಾಡಿ ಪ್ರಶಂಸೆಗೆ ಪಾತ್ರರಾಗುವಿರಿ, ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ನಿಮ್ಮದಾಗಲಿದೆ. ಪತ್ನಿಯೊಂದಿಗೆ ಸಂತಸ ವಾತವರಣವಿರುತ್ತದೆ. ನೀವು ಪ್ರಮುಖ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಿ, ಇದರಿಂದ ನಿಮ್ಮ ವರ್ಚಸ್ಸು ಬೆಳೆಯುವುದು. ಸಂಗೀತ ನಿರ್ದೇಶಕ, ಗಾಯನ ,ನೃತ್ಯ, ನಟನೆ ಪ್ರತಿಭೆಗಳಿಗೆ ಬೇಡಿಕೆ ಹೆಚ್ಚಾಗಲಿದೆ ಮತ್ತು ಒಂದು ಉತ್ತಮವಾದ ವೇದಿಕೆ ಸಿಗಲಿದೆ ಉಪಯೋಗ ಪಡಿಸಿಕೊಳ್ಳಿ. ವಿಲಾಸಿ ಜೀವನಕ್ಕೆ ಆಸೆಪಟ್ಟು ತೊಂದರೆ ಅನುಭವಿಸುವಿರಿ. ನಿಮ್ಮ ಸಂಗಾತಿ ನಿಮಗೆ ಧನ ಸಹಾಯ ಮಾಡಿ ಕಷ್ಟಗಳಿಂದ ಪಾರು ಮಾಡುತ್ತಾಳೆ.
ಆಕಾಶ ವರ್ಣದ ಬಟ್ಟೆ ಧರಿಸಿದರೆ ಶುಭ.
ಶುಭ ಸಮಯ ಬೆಳಗ್ಗೆ ಮಧ್ಯಾಹ್ನ
ಅದೃಷ್ಟ ಸಂಖ್ಯೆ: 5

ಕರ್ಕಾಟಕ ರಾಶಿ
ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಗಾಢ ಚಿಂತನೆ ಮಾಡುವಿರಿ, ವಿರೋಧವಿಲ್ಲದ ಸಾಮರಸ್ಯದ ದೃಢ ಹೆಜ್ಜೆ ಹಾಕುವಿರಿ. ಕಲೆಗಳಲ್ಲಿ ಉತ್ತಮ ಪ್ರಗತಿ. ಸದೃಢ ಶರೀರಕ್ಕಾಗಿ ಯೋಗಾಸನ ಮಾಡುವಿರಿ. ನಿಮ್ಮ ಮಕ್ಕಳು ನಿಮ್ಮ ಆಸೆ ಪೂರೈಸಲು ಕಾಲ ಬಂದಿದೆ. ವ್ಯಾಪಾರಸ್ಥರು ಇಂದು ನಷ್ಟ ಅನುಭವಿಸುವ ಸಾಧ್ಯತೆ ಇದೆ. ಬೆಟ್ಟಿಂಗ್ ದಿಂದ ಧನಹಾನಿ ಮಾನಹಾನಿ ಸಂಭವ. ಇಂದು ಸಂಗಾತಿಗಾಗಿ ಪ್ರಣಯ ಜೀವನ ದಿನರಾತ್ರಿ ಕಳೆಯಬಹುದು.
ಬದಾಮಿ ವರ್ಣದ ಬಟ್ಟೆ ಧರಿಸಿದರೆ ಶುಭವಾಗುವುದು.
ಶುಭ ಸಮಯ ಸಂಜೆ
ಅದೃಷ್ಟ ಸಂಖ್ಯೆ: 2

ಸಿಂಹ ರಾಶಿ
ಬದುಕಿಗೊಂದು ಹೊಸ ಬೆಳಕು ಮೂಡಲಿದೆ. ಕಾರ್ಯ ಸಾಧನೆಯಿಂದ ನೆಮ್ಮದಿ ಹೊಂದುವಿರಿ. ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಗೆಲುವನ್ನು ಸಾಧಿಸುವಿರಿ. ಅಧಿಕ ಮಾತುಗಳಿಂದ ಆರೋಗ್ಯ ಆರಾಮಾಗಿ ಕಾಣಿಸುತ್ತಿದೆ. ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ. ಪದೇಪದೇ ಎದೆ ನೋವು ಕಾಣಿಸುವುದು. ಕಾಯಿಲೆ ಬಗ್ಗೆ ಹೆಚ್ಚು ಮಾತನಾಡಿದಷ್ಟು ಅದು ಇನ್ನೂ ಉಲ್ಬಣಗೊಳ್ಳುವುದು. ನೀವು ಕೆಲಸದಲ್ಲಿ ತೊಡಗಿದರೆ ಒಳ್ಳೆದು. ಮಧ್ಯಪಾನ ಧೂಮಪಾನ ಮಾಡಿದಷ್ಟು, ಗಳಿಸಿರುವ ಹಣ ಆಸ್ಪತ್ರೆಗೆ ಖರ್ಚು ಭರಿಸುವಿರಿ. ಹಿರಿಯರ ಆಶೀರ್ವಾದದಿಂದ ಹೊಸ ಉದ್ಯೋಗ ಪ್ರಾರಂಭಿಸುವಿರಿ.
ಬದಾಮಿ ವರ್ಣದ ವಸ್ತ್ರ ಧರಿಸಿದರೆ ಸರ್ವ ಕಾರ್ಯ ಸಫಲ.
ಶುಭ ಸಮಯ ಬೆಳಗ್ಗೆ
ಅದೃಷ್ಟ ಸಂಖ್ಯೆ: 4

ಕನ್ಯಾ ರಾಶಿ
ಪರೋಪಕಾರದಿಂದಾಗಿ ಮಾನಸಿಕ ತೃಪ್ತಿಯನ್ನು ಹೊಂದುವಿರಿ. ಪ್ರಾಮಾಣಿಕ ಪ್ರಯತ್ನದಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬಂಧು ಮಿತ್ರರ ಆಗಮನದಿಂದ ಸಂತಸ. ಖರ್ಚು ಹೆಚ್ಚಾಗಿ ಕಾಣಿಸುತ್ತಿದೆ. ಆಕಸ್ಮಿಕವಾಗಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಡನೆ ಜಗಳ ಸಂಭವ, ವಾದವಿವಾದ ಬೇಡ ಮುಂದೆ ಸಾಗಿರಿ. ಸರ್ಕಾರಿ ಉದ್ಯೋಗ ಪಡೆಯುವುದರಲ್ಲಿ ನಿರಾಶೆಉಂಟು ಮಾಡಬಹುದು, ಪುನ: ಪ್ರಯತ್ನಿಸಿ. ನಿಮ್ಮ ಕನಸು ನನಸಾಗಲು ಒಂದು ವೇದಿಕೆ ಸಿಗುವುದು ಅದನ್ನು ಸದುಪಯೋಗಪಡಿಸಿಕೊಳ್ಳಿ.
ಕುಂಕುಮ ವರ್ಣ ಬಟ್ಟೆ ಧರಿಸಿದರೆ ಶುಭ.
ಶುಭ ಸಮಯ ಮಧ್ಯಾಹ್ನ
ಅದೃಷ್ಟ ಸಂಖ್ಯೆ: 5

ತುಲಾ ರಾಶಿ
ಒಳ್ಳೆಯ ಚಿಂತನೆಯಿಂದಾಗಿ ಉತ್ತಮ ಮನಃಸ್ಥಿತಿಯನ್ನು ಕಾಯ್ದುಕೊಳ್ಳಲು ಶಕ್ತ್ಯಾನುಸಾರ ಕೆಲಸ ಕಾರ್ಯಗಳನ್ನು ನಿರಾಶರಾಗದೆ ಸಾಧಿಸಲಿದ್ದೀರಿ. ನ್ಯಾಯಾಲಯದಲ್ಲಿ ಜಯ ದೊರೆಯುತ್ತದೆ. ಇಂದು ಕಷ್ಟದಲ್ಲಿದ್ದವರಿಗೆ ನೀವು ಸಹಾಯ ಮಾಡಬಹುದು. ಯೋಗಾಸನದಿಂದ ಚೈತನ್ಯ ಬಳಸಿ ಇದರಿಂದ ಜಿಗುಪ್ಸೆ , ಅಲಸ್ಯ, ಅನಾರೋಗ್ಯ ದೂರವಾಗುವುದು. ರಿಯಲ್ ಎಸ್ಟೇಟ್ನಲ್ಲಿ ಹಣ ಹೂಡಿಕೆ ಮಾಡುವಿರಿ. ಆಭರಣ ಖರೀದಿಸುವಿರಿ. ಸಂಗಾತಿಯ ತೀರ್ಮಾನ ಗೊಂದಲದಲ್ಲಿ ಇರುವುದು.
ತಿಳಿ ಹರಿಶಿಣ ವರ್ಣದ ವಸ್ತ್ರ ಧರಿಸಿದರೆ ಶುಭ.
ಶುಭ ಸಮಯ ಸಂಜೆ
ಅದೃಷ್ಟ ಸಂಖ್ಯೆ: 7

ವೃಶ್ಚಿಕ ರಾಶಿ
ಧೈರ್ಯದ ನಡೆ ನುಡಿಯಿಂದಾಗಿ ನೆಮ್ಮದಿ ಹೊಂದುವುದರ ಜೊತೆಗೆ ಗಾಂಭೀರ್ಯವನ್ನು ಕಾಯ್ದುಕೊಳ್ಳಲಿದ್ದೀರಿ. ವ್ಯವಹಾರದಲ್ಲಿ ನಿಮ್ಮ ವಿಶ್ವಾಸಕ್ಕೆ ದ್ರೋಹ ಬಗೆದಾರು ಎಚ್ಚರ. ಹೊಸ ಆಶಾಕಿರಣ ಮೂಡಲಿದೆ. ಅತಿಯಾದ ಕೆಲಸದ ಒತ್ತಡದಿಂದ ಆರೋಗ್ಯ ಏರು-ಪೇರು ಸಂಭವ. ವಿವಾಹಿತ ಜನರಿಗೆ ಅತ್ತೆ ಮಾವನ ಮನೆಯ ಕಡೆಯಿಂದ ಆಸ್ತಿ ಧನ ಸಹಾಯ ಸಿಗಲಿದೆ. ಕೌಟುಂಬಿಕ ಒತ್ತಡದಿಂದ ನಕಾರಾತ್ಮಕ ಚಿಂತನೆ. ಮಾರುಕಟ್ಟೆಯಲ್ಲಿ ನಿಮ್ಮ ಗಮನ ಬೇರೆ ಕಡೆ ಸೆಳೆದು ಹಣ ಕಳೆದುಕೊಳ್ಳುವ ಸಂಭವ.
ಕಿತ್ತಳೆ ವರ್ಣದ ಬಟ್ಟೆ ಧರಿಸಿದರೆ ಶುಭವಾಗುವುದು.
ಶುಭ ಸಮಯ ಬೆಳಗ್ಗೆ
ಅದೃಷ್ಟ ಸಂಖ್ಯೆ: 9

ಧನಸ್ಸು ರಾಶಿ
ಬದುಕಿಗೊಂದು ನಿಶ್ಚಿತ ಆಸರೆಯನ್ನು ಹೊಂದುವಿರಿ. ಉತ್ತಮ ಗುಣದಿಂದಾಗಿ ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ. ಅಧಿಕ ಪ್ರಯಾಣ ನಡೆಯುವುದು ಉತ್ತಮ ಲಾಭವಿದೆ. ಆಕಸ್ಮಿಕ ರಸ್ತೆಯಲ್ಲಿ ಹೋಗುವಾಗ ಅನಾಥರಿಗೆ ಅನ್ನ ದಾನ ಮಾಡುವಿರಿ. ಆತ್ಮೀಯ ಮಿತ್ರ ಮದುವೆಗೆ ಧನ ಸಹಾಯ ಕೇಳಲು ಬರುವರು. ನಿಮ್ಮ ಅಮೂಲ್ಯವಾದ ವಸ್ತು ಹುಡುಕಾಟ ನಡೆಸುವಿರಿ. ವ್ಯಾಪಾರಸ್ಥರು ಗಲ್ಲಪೆಟ್ಟಿಗೆ ಪೆಟ್ಟಿಗೆ ಮೇಲೆ ಜಾಗ್ರತೆ ಇರಲಿ.
ಕೇಸರಿ ವರ್ಣದ ವಸ್ತ್ರ ಧರಿಸಿದರೆ ಶುಭವಾಗುವುದು.
ಶುಭ ಸಮಯ ಸಂಜೆ.
ಅದೃಷ್ಟ ಸಂಖ್ಯೆ: 3

ಮಕರ ರಾಶಿ
ನ್ಯಾಯಾಂಗದ ವಿಚಾರದಲ್ಲಿ ನಿಮ್ಮ ದೃಢ ನಿರ್ಧಾರದಿಂದ ಒಳಿತನ್ನು ತರಲಿದೆ. ಸ್ಪಷ್ಟ ನಿಲುವಿನಿಂದಾಗಿ ವಿಶೇಷ ಸಾಧನೆಯ ಗರಿಮೆ ನಿಮ್ಮದಾಗಲಿದೆ. ಕ್ರೀಡಾಪಟುಗಳಿಗೆ ಹರ್ಷ. ಗುರು ಹಿರಿಯರಲ್ಲಿ ಭಯ ಭಕ್ತಿ ಯಿಂದ ನಡೆದುಕೊಳ್ಳಿ. ಮದುವೆ ವಿಚಾರಕ್ಕಾಗಿ ಸಂಗಾತಿಯೊಡನೆ ಜಗಳ ಸಂಭವ. ಅಜಾಗ್ರತೆಯಿಂದ ಅಪಘಾತ ಸಂಭವ. ಹೆಲ್ಮೆಟ್ ಧರಿಸಿ ಪ್ರಯಾಣ ಬೆಳೆಸಿ. ಹೊಸ ಉದ್ಯಮ ಪ್ರಾರಂಭಿಸಿದವರು ಆಕರ್ಷಕವಾಗಿದ್ದು ಮತ್ತು ಒಳ್ಳೆಯ ಆದಾಯ ಬರವಸೆ ಕಾಣುತ್ತದೆ. ಮಾನಸಿಕ ಒತ್ತಡದಿಂದ ನಿಯಂತ್ರಣ ತಪ್ಪಬೇಡಿ. ರಾತ್ರಿಯ ವೇಳೆ ಒಳಗಾಗಿ ನಿಮ್ಮ ಮೂಲಕ ಕೊಟ್ಟಿರುವ ಹಣ ನಿಮಗೆ ಮರಳಿ ಸಿಗಬಹುದು.
ಆಕಾಶ ವರ್ಣದ ಬಟ್ಟೆ ಧರಿಸಿದರೆ ಸರ್ವ ಕಾರ್ಯ ಯಶಸ್ವಿ.
ಶುಭ ಸಮಯ ಮಧ್ಯಾಹ್ನ
ಅದೃಷ್ಟ ಸಂಖ್ಯೆ: 3

ಕುಂಭ ರಾಶಿ
ಒಂದು ಅನನ್ಯ ಸಂತೋಷದ ಉಡುಗೊರೆಯನ್ನು ತರುತ್ತದೆ. ತನ್ನ ಸ್ನೇಹಿತ ಸಂವಹನ ಮಾಡುತ್ತಿದ್ದಾನೆ. ಮತ್ತು ವೃತ್ತಿಜೀವನದಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಾನೆ. ಆರೋಗ್ಯದಲ್ಲಿ ಕಾಳಜಿ ವಹಿಸಬೇಕು. ಕುಟುಂಬದ ಸದಸ್ಯರಿಂದ ಕಠಿಣ ಸವಾಲು ಎದುರಿಸುವ ಪ್ರಸಂಗ ಬಂದಿದೆ ಇದು ನಿಮ್ಮ ಬಾಳಸಂಗಾತಿ ಯಿಂದ ತಿಳಿಗೊಳ್ಳುತ್ತದೆ. ಇಂದು ನಿಮ್ಮ ಸ ಸಂಗಾತಿಗೆ ಬೆಲೆ ಬಾಳುವ ಉಡುಗೊರೆ ಕೊಟ್ಟು ಸಂತೋಷ ಗೊಳಿಸುವಿರಿ. ದಿನಪೂರ್ತಿ ಸಂಗಾತಿಯೊಡನೆ ಸಮಯ ಕಳೆಯಬಹುದು. ಸಹಭಾಗಿತ್ವ ಉದ್ಯಮದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವುದು.
ಇಂದು ಶ್ವೇತವರ್ಣದ ವಸ್ತ್ರ ಧರಿಸಿದರೆ ಸರ್ವ ಕಾರ್ಯ ಸಫಲವಾಗುವುದು.
ಶುಭ ಸಮಯ ಬೆಳಗ್ಗೆ
ಅದೃಷ್ಟ ಸಂಖ್ಯೆ: 6

ಮೀನಾ ರಾಶಿ
ಲೌಕಿಕ ಆನಂದ ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಪ್ರಣಯ ಮತ್ತು ಪ್ರೀತಿಯ ವಿಚಾರದಲ್ಲಿ ವಾರವು ಅಷ್ಟೊಂದು ಉತ್ತಮವಾಗಿಲ್ಲ. ಪ್ರೀತಿ ಪ್ರೇಮದ ವಿಚಾರದಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದೀರಿ. ಸಂಗಾತಿಯೊಡನೆ ಮನಸ್ತಾಪ ಸಂಭವ. ದಿನಪೂರ್ತಿ ಜಿಗುಪ್ಸೆ ಕಾಡಲಿದೆ. ಕಚೇರಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದರು ಕಿರುಕುಳ ಬಿಟ್ಟಿದ್ದಲ್ಲ. ಹಣಕಾಸಿನ ವಿಚಾರದಲ್ಲಿ ದ್ರೋಹ ಮಾಡಬಹುದು.
ಬದಾಮಿ ವರ್ಣದ ವಸ್ತ್ರ ಧರಿಸಿದರೆ ಸರ್ವ ಕಾರ್ಯ ಸಫಲ.
ಶುಭ ಸಮಯ ಬೆಳಗ್ಗೆ
ಅದೃಷ್ಟ ಸಂಖ್ಯೆ: 4

- Advertisement -
spot_img

Latest News

error: Content is protected !!