Wednesday, June 3, 2026
Homeಕರಾವಳಿಕೆಂಜಾರು: ಶಾಸಕ ಉಮಾನಾಥ ಕೋಟ್ಯಾನ್ ರಿಂದ 300 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಕೆಂಜಾರು: ಶಾಸಕ ಉಮಾನಾಥ ಕೋಟ್ಯಾನ್ ರಿಂದ 300 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

- Advertisement -
- Advertisement -

ಪೊರ್ಕೋಡಿ: ಮಂಗಳೂರು ತಾಲೂಕಿನ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಮುಲ್ಕಿ-ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ದಾನಿಗಳಾದ ಶ್ರೀ ಗಣಪತಿ ಹೆಗ್ಡೆ ಯವರ ಸಹಕಾರದಿಂದ ಪೊರ್ಕೋಡಿ ಹಾಗೂ ಕೆಂಜಾರು ಗ್ರಾಮದ ಸುಮಾರು 300 ಕುಟುಂಬಗಳಿಗೆ ಅಕ್ಕಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಅರ್ಬಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ರಿತೇಶ್ ಶೆಟ್ಟಿ, ಬಜಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಂದ್ರ ಪೆರ್ಗಡೆ, ಪಂಚಾಯತ್ ಸದಸ್ಯರಾದ ರಾಜೇಶ್ ಅಮೀನ್, ಅಣ್ಣು ಶೆಟ್ಟಿ ಪೊರ್ಕೋಡಿ,ಪ್ರಮುಖರಾದ ದಿನೇಶ್ ಶೆಟ್ಟಿ ಕೆಂಜಾರ್, ವಿಜಯ್ ಕುಮಾರ್ ಕಾನ, ನಿತಿನ್ ಶೆಟ್ಟಿ, ತಾರಾನಾಥ್ ಶೆಟ್ಟಿ ಪೊರ್ಕೋಡಿ, ಸುಧಾಕರ್ ಶೆಟ್ಟಿ, ಕೀರ್ತಿ, ಮಿಥುನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!