Friday, June 5, 2026
Homeಉದ್ಯಮರೈಲು ಸಂಚಾರ ಆರಂಭ: ಕೇವಲ 3 ಗಂಟೆಯಲ್ಲಿ ಬುಕ್ ಆದ ಟಿಕೆಟ್ ಎಷ್ಟು ಗೊತ್ತೇ ?

ರೈಲು ಸಂಚಾರ ಆರಂಭ: ಕೇವಲ 3 ಗಂಟೆಯಲ್ಲಿ ಬುಕ್ ಆದ ಟಿಕೆಟ್ ಎಷ್ಟು ಗೊತ್ತೇ ?

- Advertisement -
- Advertisement -

ನವದೆಹಲಿ: ಕೊರೊನಾವೈರಸ್ ಅವಧಿಯಲ್ಲಿ ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಸಮಯದ ಲಾಕ್‌ಡೌನ್ ನಂತರ ಆರ್ಥಿಕತೆಯನ್ನು ಮತ್ತೆ ಟ್ರ್ಯಾಕ್‌ಗೆ ತರಲು ಪ್ರಯತ್ನಗಳು ನಿಧಾನವಾಗಿ ಪ್ರಾರಂಭವಾಗಿವೆ. ಈ ಸರಣಿಯಲ್ಲಿ ಭಾರತೀಯ ರೈಲ್ವೆ ಇಂದಿನಿಂದ 15 ಸ್ಥಳಗಳಿಗೆ ರೈಲು ಸೇವೆಯನ್ನು ಪ್ರಾರಂಭಿಸುತ್ತಿದೆ. ನಿನ್ನೆಯಿಂದ (ಮೇ 11) ಆನ್ ಲೈನ್ ಟಿಕೆಟ್ ಮಾರಾಟ ಶುರುವಾಗಿದೆ.

ಐಆರ್ ಸಿಟಿಸಿಯಿಂದ ಆನ್ ಲೈನ್ ನಲ್ಲಿ 54,000ಕ್ಕೂ ಹೆಚ್ಚು ಪ್ರಯಾಣಿಕರಿಂದ ಅಂದಾಜು 30 ಸಾವಿರ ಟಿಕೆಟ್ ಮಾರಾಟವಾಗಿದೆ. ಅದು ಕೇವಲ ಮೂರು ಗಂಟೆಯೊಳಗಾಗಿ. ಎಲ್ಲ ಮೂರು ಏಸಿ ಕ್ಲಾಸ್ ಟಿಕೆಟ್ ಗಳು ಮುಂಬೈ ಸೆಂಟ್ರಲ್- ನವ ದೆಹಲಿ ಮಧ್ಯೆ ಮೇ 18ರ ತನಕ ಮಾರಾಟ ಆಗಿದೆ.

ಹವಾ ನಿಯಂತ್ರಿತ ರೈಲುಗಳಿಗೆ ಮಾರಾಟ ಮಾಡಿರುವ ಟಿಕೆಟ್ ಗಳಿಂದ 10 ಕೋಟಿ ರುಪಾಯಿ ಆದಾಯ ಬಂದಿದೆ. ಹೌರಾದಿಂದ ಬರುವ ಹಾಗೂ ದೆಹಲಿಯಿಂದ ತೆರಳುವ ರೈಲುಗಳಿಗೆ ತುಂಬ ವೇಗವಾಗಿ ಟಿಕೆಟ್ ಬುಕ್ ಆಗಿದೆ ಎಂದು ಸೋಮವಾರ ರಾತ್ರಿ 9 ಗಂಟೆ ತನಕದ ಮಾಹಿತಿಯನ್ನು ಆಧರಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯಿಂದ ಹದಿನೈದು ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂವತ್ತು ರೈಲುಗಳಿಗಾಗಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಅನ್ನು ಸೋಮವಾರ ಸಂಹೆ ನಾಲ್ಕು ಗಂಟೆಯಿಂದ ಆರಂಭಿಸುವುದಾಗಿ ಘೋಷಿಸಿತ್ತು. ಆದರೆ ಅದು ಎರಡು ಗಂಟೆ ತಡವಾಯಿತು. ಒಂದೂವರೆ ಗಂಟೆಯೊಳಗೆ ಹದಿನೆಂಟು ಸಾವಿರ ಟಿಕೆಟ್ ಬುಕ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಗೆ ಬೇಕಾದ ಮಾರ್ಗಕ್ಕೆ ಟಿಕೆಟ್ ಬುಕ್ ಮಾಡಲು ಆಗುತ್ತಿಲ್ಲ ಎಂದು ಕೆಲವರು ದೂರಿದ್ದರು. ಟ್ವಿಟ್ಟರ್ ಮೂಲಕ ಐಆರ್ ಸಿಟಿಸಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

- Advertisement -

Latest News

error: Content is protected !!