Tuesday, December 3, 2024
Homeಜ್ಯೋತಿಷ್ಯಮನೆಯಲ್ಲಿ ರೋಗಿಗಳಿದ್ರೆ ದಿಂಬಿನ ಕೆಳಗಿಡಿ ಈ ವಸ್ತು

ಮನೆಯಲ್ಲಿ ರೋಗಿಗಳಿದ್ರೆ ದಿಂಬಿನ ಕೆಳಗಿಡಿ ಈ ವಸ್ತು

spot_img
- Advertisement -
- Advertisement -

ಮನೆಯಲ್ಲಿ ದೇವರ ಫೋಟೋವನ್ನಿಡಬೇಕು. ದೇವರ ಪೂಜೆ, ಆರಾಧನೆಗಳು ನಡೆಯುತ್ತಿರುತ್ತವೆ. ಆದ್ರೆ ಮನೆಯಲ್ಲಿಡುವ ಕೆಲ ಫೋಟೋಗಳು ಶುಭ ಫಲ ನೀಡಿದ್ರೆ ಮತ್ತೆ ಕೆಲ ಫೋಟೋಗಳು ಅಶುಭ ಘಟನೆಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಮನೆಯಲ್ಲಿರುವ ಶ್ರೀಕೃಷ್ಣನ ಫೋಟೋ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತೆ. ಶ್ರೀಕೃಷ್ಣನ ಫೋಟೋವನ್ನು ಮನೆಯಲ್ಲಿಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ.

ಜ್ಯೋತಿಷಿಗಳ ಪ್ರಕಾರ, ಶ್ರೀಕೃಷ್ಣನ ಚಿತ್ರವನ್ನು ಮನೆಯಲ್ಲಿ ಇಡುವುದು ಬಹಳ ಶುಭ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ವಾಸುದೇವ ಕೃಷ್ಣನನ್ನು ತಲೆ ಮೇಲೆ ಹೊತ್ತು ನದಿ ದಾಟುವ ಫೋಟೋವನ್ನು ಅವಶ್ಯಕವಾಗಿ ಇಡಬೇಕು. ಮನೆಯ ಎಲ್ಲಾ ತೊಂದರೆಗಳನ್ನು ತೆಗೆದು ಹಾಕುತ್ತದೆ.

ಕೃಷ್ಣ ಬೆಣ್ಣೆ ತಿನ್ನುವ ಚಿತ್ರವನ್ನು ಅಡುಗೆ ಮನೆಯಲ್ಲಿ ಇಡಬೇಕು. ಯಾವುದೇ ದೇವತೆಯ ಚಿತ್ರವನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಶ್ರೀಕೃಷ್ಣ ಮತ್ತು ರಾಧಾ ಅವರ ಚಿತ್ರ ಪ್ರೀತಿಯನ್ನು ಗಟ್ಟಿಗೊಳಿಸುತ್ತದೆ. ಮಹಾಭಾರತ ಯದ್ಧದ ಯಾವುದೇ ಫೋಟೋವನ್ನು ಮನೆಯಲ್ಲಿ ಹಾಕಬಾರದು.

ಶ್ರೀಕೃಷ್ಣನಿಗೆ ಕೊಳಲು ತುಂಬಾ ಇಷ್ಟ. ಕೊಳಲನ್ನು ಮನೆಯಲ್ಲಿ ಇಡುವುದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಕೊಳಲನ್ನು ಇಟ್ಟುಕೊಳ್ಳುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಯಾವುದೇ ರೋಗಿಗಳಿದ್ದರೆ ಮತ್ತು ಅವರ ಆರೋಗ್ಯವು ಸರಿಯಾಗದಿದ್ದರೆ, ಬಿದಿರಿನ ಕೊಳಲನ್ನು ಅವರ ದಿಂಬಿನ ಕೆಳಗೆ ಇಡಬೇಕು.

- Advertisement -
spot_img

Latest News

error: Content is protected !!