- Advertisement -
- Advertisement -
ಕೃಷ್ಣ ನಗರಿ ಉಡುಪಿಯಿಂದ ಸುಮಾರು 21 ಕಿ.ಮೀ. ದೂರದಲ್ಲಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಪಟ್ಟಣ ಸಾಲಿಗ್ರಾಮ.
ಗುರು ನರಸಿಂಹ ಇಲ್ಲಿನ ಆರಾಧ್ಯ ದೈವ. ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿದೆ ಎನ್ನಲಾದ ಈ ದೇವಾಲಯದಲ್ಲಿ ನಾರದ ಮಹರ್ಷಿಗಳೇ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು ಎಂಬ ನಂಬಿಕೆಯಿದೆ.
ಮಂಗಳೂರಿನಿಂದ 81 ಕಿ.ಮೀ ದೂರದಲ್ಲಿರುವ ಸಾಲಿಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿ 17ರ ಮೂಲಕ ಸುಲಭವಾಗಿ ತಲುಪಬಹುದು.
ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲ್ಪಟ್ಟ ಶಂಕಚಕ್ರಧಾರಿ ಗುರು ನರಸಿಂಹ ಮೂರ್ತಿ ಇಲ್ಲಿದೆ. ನರಸಿಂಹ ದೇವರಿಗೆ ಅಭಿಮುಖವಾಗಿ ಶ್ರೀ ಅಂಜನೇಯ ಸ್ವಾಮಿ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಇದರಿಂದ ಉಗ್ರ ಸ್ವರೂಪಿ ನರಸಿಂಹನ ಕೋಪಾವತಾರ ಕಮ್ಮಿಯಾಗುತ್ತದೆಂದು ಇಲ್ಲಿಯ ಜನರ ನಂಬಿಕೆ.
ಪ್ರತಿ ವರ್ಷ ಜನವರಿಯಲ್ಲಿ ಇಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ.
- Advertisement -