- Advertisement -
- Advertisement -
ಅವರ ಭಾಷಣದ ಮುಖ್ಯಾಂಶಗಳು:
– ಮೇ 3 ರವರೆಗೂ (19 ದಿನಗಳ ಕಾಲ) ಲಾಕ್ ಡೌನ್ ಮುಂದುವರಿಕೆ – ಪ್ರಧಾನಿ ನರೇಂದ್ರ ಮೋದಿ
- ಕೊರೊನಾ ಹಾಟ್ ಸ್ಪಾಟ್ ಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು – ಪ್ರಧಾನಿ ನರೇಂದ್ರ ಮೋದಿ
- ಕೊರೊನಾ ಮಹಾಮಾರಿ ವಿರುದ್ಧ ನಾವೆಲ್ಲರೂ ಹೋರಾಟ ಮಾಡ್ತಿದ್ದೇವೆ. ಎಲ್ಲಾ ದೇಶವಾಸಿಗಳ ತಪಸ್ಸಿನಿಂದ ಕೊರೊನಾ ತಡೆಯಲು ಸಕ್ಸಸ್ ಆಗಿದ್ದೇವೆ – ಪ್ರಧಾನಿ ನರೇಂದ್ರ ಮೋದಿ
- ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ನಮನ ಸಲ್ಲಿಸುತ್ತಿದ್ದೇನೆ – ಪ್ರಧಾನಿ ನರೇಂದ್ರ ಮೋದಿ
- ಲಾಕ್ ಡೌನ್ ನಿಂದ ಕೆಲವರಿಗೆ ಊಟಕ್ಕೆ ತೊಂದರೆಯಾಯಿತು, ಓಡಾಟಕ್ಕೆ ಕಷ್ಟವಾಯಿತು. ನಿಮಗೆಲ್ಲ ಎಷ್ಟು ಕಷ್ಟವಾಗಿದೆ ಎಂದು ನನಗೆ ಗೊತ್ತಿದೆ – ಪ್ರಧಾನಿ ನರೇಂದ್ರ ಮೋದಿ
- ವಿದೇಶದಿಂದ ಬಂದಿದ್ದ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಿದ್ದೇವೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಿದ್ದೇವೆ. ಬೇರೆ ದೇಶಗಳಿಗೆ ಹೋಲಿಸಿದರೆ, ಕೊರೊನಾ ಸೋಂಕನ್ನು ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ – ಪ್ರಧಾನಿ ನರೇಂದ್ರ ಮೋದಿ
- ಭಾರತದಲ್ಲಿ 550 ಕೇಸ್ ಇದ್ದಾಗ ಲಾಕ್ ಡೌನ್ ಘೋಷಣೆ ಆಯಿತು. ನಾವು ಆಯ್ಕೆ ಮಾಡಿಕೊಂಡ ಮಾರ್ಗ ಸರಿಯಾಗಿದೆ. ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ನಿಂದ ಭಾರತಕ್ಕೆ ದೊಡ್ಡ ಲಾಭವಾಗಿದೆ – ಪ್ರಧಾನಿ ನರೇಂದ್ರ ಮೋದಿ
- ಕೊರೊನಾ ವಿರುದ್ಧ ಹೋರಾಟ ಮತ್ತಷ್ಟು ಕಠಿಣ ಆಗಲಿದೆ. ಏಪ್ರಿಲ್ 20 ರವರೆಗೂ ಪರಿಶೀಲನೆ ನಡೆಸಲಾಗುವುದು. ಹಾಟ್ ಸ್ಪಾಟ್ ಗಳಲ್ಲಿ ಪರಿಸ್ಥಿತಿ ಬದಲಾಗದಿದ್ದರೆ, ಎಲ್ಲವೂ ಕೈಮೀರಲಿದೆ – ಪ್ರಧಾನಿ ನರೇಂದ್ರ ಮೋದಿ
- Advertisement -