Thursday, June 4, 2026
Homeಕರಾವಳಿಉಡುಪಿಅಕ್ರಮ ಕಸಾಯಿಖಾನೆಗೆ ದಾಳಿ, ಆರು ಮಂದಿಯ ಬಂಧನ

ಅಕ್ರಮ ಕಸಾಯಿಖಾನೆಗೆ ದಾಳಿ, ಆರು ಮಂದಿಯ ಬಂಧನ

- Advertisement -
- Advertisement -

ಕಾಪು : ಇಲ್ಲಿನ ಠಾಣೆ ವ್ಯಾಪ್ತಿಯ ಮೂಳೂರು ಎಂಬಲ್ಲಿ ಅಕ್ರಮವಾಗಿ ಕಸಾಯಿ ಖಾನೆಗೆ ದಾಳಿ ನಡೆಸಿ ದನ ಕರುಗಳನ್ನು ಕದ್ದು ತಂದು ಮಾಂಸ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಮೂವರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಳೂರು ಸುನ್ನಿ ಸೆಂಟರ್ ಹಿಂಬದಿ ಅಬ್ಬು ಮಹಮ್ಮದ್ ಎಂಬವರ ಮನೆಯ ಬಳಿಯ ಅಕ್ರಮ‌ ಕಸಾಯಿಖಾನೆಗೆ ದಾಳಿ ನಡೆಸಿದ್ದು, ನಾಲ್ಕು ಕರುಗಳನ್ನು ರಕ್ಷಿಸಿದ್ದಾರೆ.

ಮುಳೂರು ನಿವಾಸಿ ಮನ್ಸೂರ್ ಅಹಮ್ಮದ್ ಯಾನೆ ಅಹಮ್ಮದ್ ಮನ್ಸೂರ್ (32 ವ) , ಮಹಮ್ಮದ್ ಅಜರುದ್ಧೀನ್ (26 ವ), ಮಹಮ್ಮದ್ ಹನೀಫ್ ಯಾನೆ ಆಸ್ಪಕ್ (28 ವ), ಮಹಮ್ಮದ್ ಇಸ್ಮಾಯಿಲ್ (22 ವ), ಚಂದ್ರನಗರ ನಿವಾಸಿ ಉಮ್ಮರಬ್ಬ (60 ವ), ಚಿಕ್ಕಮಗಳೂರು ಕೊಪ್ಪ ನಿವಾಸಿ ನವಾಜ್ (25 ವ) ಎಂಬವರನ್ನು ಬಂಧಿಸಿದ್ದು, ಇವರ ಜೊತೆಗಿದ್ದ ಇಸ್ಮಾಯಿಲ್, ರಫೀಕ್, ಅಬ್ಬು ಮಹಮ್ಮದ್ ಎಂಬವರು ಪರಾರಿಯಾಗಿದ್ದಾರೆ.

ಬಂಧತರಿಂದ ಪಿಕ್ ಅಪ್ ವಾಹನ ಮತ್ತು ನಾಲ್ಕು ದ್ವಿಚಕ್ರ ವಾಹನ, 30 ಕೆ.ಜಿ. ಮಾಂಸ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾಪು ಎಸ್‌ಐ ರಾಘವೇಂದ್ರ ಸಿ. ಅವರಿಗೆ ದೊರಕಿದ ಖಚಿತ ಮಾಹಿತಿಯಂತೆ, ಸಿಬಂದಿಗಳ ಜೊತೆಗೂಡಿ ಪೊಲೀಸರು ಧಾಳಿ ನಡೆಸಲಾಗಿತ್ತು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!