Thursday, June 4, 2026
Homeಕರಾವಳಿಕಾಸರಗೋಡು ದೋಣಿ ದುರಂತ: ನಾಪತ್ತೆಯಾದ ಮೂವರು ಮೀನುಗಾರರ ಮೃತದೇಹ ಪತ್ತೆ

ಕಾಸರಗೋಡು ದೋಣಿ ದುರಂತ: ನಾಪತ್ತೆಯಾದ ಮೂವರು ಮೀನುಗಾರರ ಮೃತದೇಹ ಪತ್ತೆ

- Advertisement -
- Advertisement -

ಕಾಸರಗೋಡು: ಇಲ್ಲಿಯ ತಳಂಗರೆ ಸಮೀಪದ ಕಸಬಾ ಕಡಪ್ಪುರ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ರವಿವಾರ ಬೆಳಗ್ಗೆ ಮಗುಚಿ ಬಿದ್ದ ಘಟನೆಯಲ್ಲಿ ನಾಪತ್ತೆಯಾಗಿದ್ದ ಮೂವರ ಶವ ಇಂದು ಪತ್ತೆಯಾಗಿದೆ.

ನಾಪತ್ತೆಯಾಗಿದ್ದ ಕಡಪ್ಪುರ ನಿವಾಸಿಗಳಾದ ಸಂದೀಪ್ (33 ವ), ರತೀಶನ್ (30 ವ) ಮತ್ತು ಕಾರ್ತಿಕ್ (29 ವ) ಅವರ ಶವ ಬೇಕಲ ಕೋಟೆಯ ಪತ್ತೆಯಾಗಿದೆ.

ಕಾಸರಗೋಡು ಕಸಬಾ ಕಡಪ್ಪುರದಿಂದ ಆಂಜನೇಯ ಎಂಬ ಫೈಬರ್ ದೋಣಿ ಯಲ್ಲಿ ಏಳು ಮಂದಿ ಮೀನುಗಾರಿಕೆಗೆ ತೆರಳಿದ್ದು , ಕಿಯೂರು ಸಮೀಪ ಸಮುದ್ರದಲ್ಲಿ ಪ್ರಬಲವಾದ ಗಾಳಿ ಬೀಸಿದ್ದರಿಂದ ನಿಯಂತ್ರಣ ತಪ್ಪಿದ ದೋಣಿಯು ಮಗುಚಿ ಬಿದ್ದು ಈ ಘಟನೆ ನಡೆದಿತ್ತು . ಈ ವೇಳೆ ಮೂವರು ನಾಪತ್ತೆಯಾಗಿದ್ದರೆ, ನಾಲ್ವರು ಈಜಿ ದಡ ಸೇರಿ ಅಪಾಯದಿಂದ ಪಾರಾಗಿದ್ದರು.

ಅಡ್ಕತ್ತಬೈಲ್ ಬೀಚ್ ನ ಬಿ . ಮನಿಕುಟ್ಟನ್ ( 36) , ಕೋಟಿಕುಳಂ ಕಡಪ್ಪುರದ ರವಿ ( 22) , ನೆಲ್ಲಿಕುಂಜೆಯ ಶಶಿ ( 35) ಮತ್ತು ಕಸಬಾ ದ ಶಿಬಿನ್ ( 23) ಅಪಾಯದಿಂದ ಪಾರಾಗಿದ್ದರು .

- Advertisement -

Latest News

error: Content is protected !!