Friday, June 5, 2026
Homeಕರಾವಳಿಕಾಸರಗೋಡುಕಾಸರಗೋಡು: ದುಬೈಯಲ್ಲಿ ಸಮುದ್ರ ಪಾಲಾದ ಕಾಸರಗೋಡು ಮೂಲದ ಬಾಲಕ

ಕಾಸರಗೋಡು: ದುಬೈಯಲ್ಲಿ ಸಮುದ್ರ ಪಾಲಾದ ಕಾಸರಗೋಡು ಮೂಲದ ಬಾಲಕ

- Advertisement -
- Advertisement -

ಕಾಸರಗೋಡು: ಕಾಸರಗೋಡು ಮೂಲದ ಬಾಲಕ ದುಬೈಯಲ್ಲಿ ಸಮುದ್ರ ಪಾಲಾದ ಘಟನೆ ನಡೆದಿದೆ. ಚೆಂಗಳ ನಿವಾಸಿ ಅಬ್ದುಲ್ಲ ಮಫಾಝ್(15) ಮೃತ ಬಾಲಕ.

ಚೆಂಗಳ ಥೈವಲಪ್ಪು ನಿವಾಸಿ, ದುಬೈನ ಬಟ್ಟೆ ವ್ಯಾಪಾರಿ ಎ.ಪಿ.ಅಶ್ರಫ್ ಮತ್ತು ನಸೀಮಾ ದಂಪತಿಯ ಪುತ್ರನಾಗಿದ್ದ ಮಫಾಝ್  ದುಬೈ ನ್ಯೂ ಇಂಡಿಯನ್ ಮಾಡೆಲ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಶುಕ್ರವಾರ ಮನ್ಸಾರ್ (Al Mansar Beach) ಬೀಚ್ ಗೆ ತೆರಳಿದ್ದಾಗ ಘಟನೆ ನಡೆದಿದೆ.ರಜಾದಿನವಾದ ಶುಕ್ರವಾರ ಮಫಾಸ್ ತನ್ನ ಕುಟುಂಬದೊಂದಿಗೆ ಮನ್ಸರ್ ಬೀಚ್ ಗೆ ಬಂದಿದ್ದರು. ಚೆಂಡಿನೊಂದಿಗೆ ಆಡುವಾಗ ಬಾಲ್  ಸಮುದ್ರಕ್ಕೆ ಬಿದ್ದಾಗ, ಅವನು ಅದನ್ನು ತೆಗೆದುಕೊಳ್ಳಲು ಹೋಗಿ ಇದ್ದಕ್ಕಿದ್ದಂತೆ  ಕಡಲಿನ ಸೆರೆಗೆ ಸಿಕ್ಕಿ ಕೊಚ್ಚಿ ಹೋಗಿದ್ದಾನೆ.

ಘಟನೆಯ ನಂತರ, ಅಧಿಕಾರಿಗಳು ಸ್ಥಳಕ್ಕೆ ತಲುಪಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಹಲವು ಗಂಟೆಗಳ ಶೋಧದ ನಂತರ ಅಪಘಾತ ಸಂಭವಿಸಿದ ಸ್ಥಳದಿಂದ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ಸ್ಥಳಾಂತರಿಸಲಾಗಿದೆ.

- Advertisement -

Latest News

error: Content is protected !!