Saturday, May 4, 2024
Homeಕರಾವಳಿಉಡುಪಿಇಂದಿನಿಂದ ಕಾರವಾರ ಹಾಗೂ ಬೆಂಗಳೂರು ನಡುವೆ ರೈಲು ಸಂಚಾರ ಆರಂಭ

ಇಂದಿನಿಂದ ಕಾರವಾರ ಹಾಗೂ ಬೆಂಗಳೂರು ನಡುವೆ ರೈಲು ಸಂಚಾರ ಆರಂಭ

spot_img
- Advertisement -
- Advertisement -

ಕಾರವಾರ : ಕಾರವಾರ- ಬೆಂಗಳೂರು-ಕಾರವಾರ ರೈಲು ಸಂಚಾರ ಇಂದಿನಿಂದ ಆರಂಭವಾಗಲಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ. ಮಾರ್ಚ್‌ನಲ್ಲಿ ಕೋವಿಡ್ ಲಾಕ್ ಡೌನ್ ಘೋಷಣೆ ಮಾಡಿದಾಗ ರೈಲು ಸಂಚಾರ ಸ್ಥಗಿತಗೊಂಡಿತ್ತು

ವಿಶೇಷ ಪರೀಕ್ಷಾ ರೈಲು ಹೆಸರಿನಲ್ಲಿ ಕೊಂಕಣ ರೈಲ್ವೆ ಕಾರವಾರ-ಬೆಂಗಳೂರು-ಕಾರವಾರ ರೈಲನ್ನು ಶುಕ್ರವಾರದಿಂದ ಓಡಿಸಲಿದೆ. ಮುಂದಿನ ಆದೇಶದ ತನಕ ರೈಲುಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆ ಹೇಳಿದೆ.

ರೈಲು ನಂಬರ್ 06585 ಯಶವಂತರಪುರ-ಕಾರವಾರ ಮತ್ತು ನಂ.06586 ಕಾರವಾರ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಈ ಹಿಂದೆ ರೈಲು ಸಂಚಾರ ನಡೆಸುತ್ತಿದ್ದ ವೇಳಾಪಟ್ಟಿ ಅನ್ವಯವೇ ಸಂಚಾರ ನಡೆಸಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಸೆ.4ರಂದು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 8.25ಕ್ಕೆ ಕಾರವಾರ ತಲುಪಲಿದೆ. ಸೆಪ್ಟೆಂಬರ್ 5ರಂದು ಸಂಜೆ 6 ಗಂಟೆಗೆ ಕಾರವಾರದಿಂದ ಬೆಂಗಳೂರಿಗೆ ರೈಲು ಹೊರಡಲಿದೆ.

ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣಿಕರು ಸಂಚಾರ ನಡೆಸಬೇಕಿದೆ. ರೈಲು 7 ಸ್ಲೀಪರ್, 13ಟೈರ್ ಎಸಿ, 1 2 ಟೈರ್ ಎಸಿ, 4 ಸಾಮಾನ್ಯ ಬೋಗಿಗಳು ಸೇರಿ 15 ಬೋಗಿಯನ್ನು ಒಳಗೊಂಡಿದೆ. ಈ ರೈಲಿಗೆ ಸ್ಟೇಷನ್‌ನಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಪ್ರಕಟಣೆ ಹೇಳಿದೆ.

- Advertisement -
spot_img

Latest News

error: Content is protected !!