Thursday, June 4, 2026
Homeತಾಜಾ ಸುದ್ದಿನವದೆಹಲಿಯಲ್ಲಿ ಕರ್ತವ್ಯ ಪಥ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿಯಲ್ಲಿ ಕರ್ತವ್ಯ ಪಥ ಉದ್ಘಾಟಿಸಿದ ಪ್ರಧಾನಿ ಮೋದಿ

- Advertisement -
- Advertisement -

ನವದೆಹಲಿ: ಹೊಸ ಟಚ್ ಪಡೆದಿರುವ ನವದೆಹಲಿಯ ರಾಜಪಥ ಕರ್ತವ್ಯ ಪಥ ಎಂದು ಮರು ನಾಮಕರಣಗೊಂಡು ಇಂದು ಉದ್ಘಾಟನೆಗೊಂಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಕರ್ತವ್ಯ ಪಥವನ್ನು ಉದ್ಘಾಟಿಸಿದ್ದಾರೆ. 3.20 ಕಿಲೋ ಮೀಟರ್ ಉದ್ದದ ಕರ್ತವ್ಯ ಪಥ ವಿಜಯ್ ಚೌಕ್ ಮತ್ತು ಇಂಡಿಯಾ ಗೇಟ್ ಅನ್ನು ಸಂಪರ್ಕಿಸುತ್ತದೆ.

ಇದೇ ವೇಳೆ ಕರ್ತವ್ಯ ಪಥದಲ್ಲಿ 65 ಮೆಟ್ರಿಕ್ ಟನ್ ತೂಕವಿರುವ 28 ಅಡಿ ಎತ್ತರದ ನೇತಾಜಿ ಸುಭಾಷ್ ಚಂದ್ರ ‌ಬೋಸ್ ಪ್ರತಿಮೆಯನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಗೊಳಿಸಿದ್ದಾರೆ.

ಇಂದು ಸಂಜೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಬಟನ್ ಒತ್ತುವ ಮೂಲಕ ಮೋದಿ ಕರ್ತವ್ಯ ಪಥ ಉದ್ಘಾಟಿಸಿ ನೇತಾಜಿ ಪ್ರತಿಮೆ ಅನಾವರಣಗೊಳಿಸಿದರು.

- Advertisement -

Latest News

error: Content is protected !!