Friday, August 14, 2026
Homeತಾಜಾ ಸುದ್ದಿತೀವ್ರ ವಿರೋಧದ ಬೆನ್ನಲ್ಲೇ ಗುಟ್ಕಾ ನಿಷೇಧ ಆದೇಶ ದಿಢೀರ್ ವಾಪಸ್: ಅಡಿಕೆ ಬೆಳೆಗಾರರಿಗೆ ದೊಡ್ಡ ರಿಲೀಫ್!

ತೀವ್ರ ವಿರೋಧದ ಬೆನ್ನಲ್ಲೇ ಗುಟ್ಕಾ ನಿಷೇಧ ಆದೇಶ ದಿಢೀರ್ ವಾಪಸ್: ಅಡಿಕೆ ಬೆಳೆಗಾರರಿಗೆ ದೊಡ್ಡ ರಿಲೀಫ್!

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ವಿಧಿಸಲಾಗಿದ್ದ ಒಂದು ವರ್ಷದ ನಿಷೇಧದ ಆದೇಶವನ್ನು ಕರ್ನಾಟಕ ಸರ್ಕಾರ ಕೇವಲ ಎರಡೇ ದಿನಗಳಲ್ಲಿ ದಿಢೀರ್ ಹಿಂಪಡೆದಿದೆ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ನಿಷೇಧ ಹೇರಿತ್ತಾದರೂ, ಮಲೆನಾಡು ಹಾಗೂ ಕರಾವಳಿ ಭಾಗದ ಶಾಸಕರು ಮತ್ತು ಅಡಿಕೆ ಬೆಳೆಗಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಗುಟ್ಕಾ ನಿಷೇಧದಿಂದ ಅಡಿಕೆ ಬೆಲೆ ಕುಸಿದು ಲಕ್ಷಾಂತರ ಬೆಳೆಗಾರರ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂದು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು. ಅಲ್ಲದೆ, ನಿಷೇಧದ ಸುದ್ದಿಯಿಂದಾಗಿ ಕಾಳಸಂತೆಯಲ್ಲಿ ಗುಟ್ಕಾ ದುಬಾರಿ ಬೆಲೆಗೆ ಮಾರಾಟವಾಗುವ ಗೊಂದಲವೂ ಸೃಷ್ಟಿಯಾಗಿತ್ತು.

ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಶೇ. 70 ರಿಂದ 75 ರಷ್ಟು ಪಾಲು ಹೊಂದಿರುವ ಕರ್ನಾಟಕದಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಗಳ ಲಕ್ಷಾಂತರ ರೈತರಿಗೆ ಅಡಿಕೆಯೇ ಜೀವನಾಧಾರವಾಗಿದೆ. ಇದೀಗ ಸರ್ಕಾರ ನಿಷೇಧದ ಆದೇಶ ಹಿಂಪಡೆದಿರುವುದರಿಂದ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

- Advertisement -

Latest News

error: Content is protected !!