Monday, September 28, 2026
Homeಕರಾವಳಿಮಂಗಳೂರುದಸರಾ ರಜೆ ಕಡಿತಗೊಳಿಸಿದರೆ ಕಾನ್ವೆಂಟ್ ಶಾಲೆಗಳ ಮುಂದೆ ಬೃಹತ್ ಪ್ರತಿಭಟನೆ: ಪ್ರಮೋದ್ ಮುತಾಲಿಕ್ ಎಚ್ಚರಿಕೆ

ದಸರಾ ರಜೆ ಕಡಿತಗೊಳಿಸಿದರೆ ಕಾನ್ವೆಂಟ್ ಶಾಲೆಗಳ ಮುಂದೆ ಬೃಹತ್ ಪ್ರತಿಭಟನೆ: ಪ್ರಮೋದ್ ಮುತಾಲಿಕ್ ಎಚ್ಚರಿಕೆ

- Advertisement -
- Advertisement -

ಮಂಗಳೂರು: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸರ್ಕಾರ ಪ್ರಕಟಿಸಿರುವ ದಸರಾ ರಜೆ ಅವಧಿಯಲ್ಲಿ ತರಗತಿ ಹಾಗೂ ಪರೀಕ್ಷೆ ನಡೆಸಿ, ಆ ರಜೆಯನ್ನು ಡಿಸೆಂಬರ್‌ನ ಕ್ರಿಸ್ಮಸ್ ಹಬ್ಬಕ್ಕೆ ವರ್ಗಾಯಿಸುವ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರ್ಕಾರವು ದಸರಾ ಹಬ್ಬದ ಸಂದರ್ಭದಲ್ಲಿ ಕಡ್ಡಾಯವಾಗಿ 19 ರಿಂದ 20 ದಿನಗಳ ಅಧಿಕೃತ ರಜೆ ಘೋಷಿಸಿದೆ. ಆದರೆ ಹಲವು ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳು ಈ ಅವಧಿಯಲ್ಲಿ ಪರೀಕ್ಷೆ ಹಾಗೂ ತರಗತಿಗಳನ್ನು ನಡೆಸಿ, ಆ ರಜೆಯನ್ನು ಕ್ರಿಸ್ಮಸ್ ಹಬ್ಬಕ್ಕೆ 10 ದಿನಗಳ ಕಾಲ ಶಿಫ್ಟ್ ಮಾಡುತ್ತಿವೆ. ಇದು ಸರ್ಕಾರದ ನಿಯಮಾವಳಿಗಳ ನೇರ ಉಲ್ಲಂಘನೆ,” ಎಂದು ಆರೋಪಿಸಿದರು.

“ಕಾನ್ವೆಂಟ್ ಶಾಲೆಗಳಲ್ಲಿ ಶೇಕಡಾ 99 ರಷ್ಟು ಹಿಂದೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿದ್ದಾರೆ. ದಸರಾ ಸಮಯದಲ್ಲಿ ಪರೀಕ್ಷೆ ಇಡುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಹಬ್ಬವನ್ನು ಆಚರಿಸಲಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಶಿಕ್ಷಣ ಸಚಿವರು, ಡಿಡಿಪಿಐ ಹಾಗೂ ಬಿಇಒ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಗುವುದು. ನಿಯಮ ಉಲ್ಲಂಘಿಸಿ ತರಗತಿ ನಡೆಸುವ ಶಾಲೆಗಳ ಎದುರು ಧರಣಿ ನಡೆಸಲಾಗುವುದು,” ಎಂದು ಅವರು ಆಗ್ರಹಿಸಿದರು.

- Advertisement -

Latest News

error: Content is protected !!