Thursday, June 4, 2026
Homeತಾಜಾ ಸುದ್ದಿಎಸಿಬಿಯಲ್ಲಿನ ಸಿಬ್ಬಂದಿ, ಪ್ರಕರಣಗಳನ್ನು ಶೀಘ್ರವೇ ವರ್ಗಾಯಿಸಿ:ಸರ್ಕಾರಕ್ಕೆ ಕರ್ನಾಟಕ ಲೋಕಾಯುಕ್ತ ಸೂಚನೆ

ಎಸಿಬಿಯಲ್ಲಿನ ಸಿಬ್ಬಂದಿ, ಪ್ರಕರಣಗಳನ್ನು ಶೀಘ್ರವೇ ವರ್ಗಾಯಿಸಿ:ಸರ್ಕಾರಕ್ಕೆ ಕರ್ನಾಟಕ ಲೋಕಾಯುಕ್ತ ಸೂಚನೆ

- Advertisement -
- Advertisement -

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದಿಂದ ಶೀಘ್ರವಾಗಿ ಸಿಬ್ಬಂದಿಗಳನ್ನು ಮತ್ತು ಪ್ರಕರಣಗಳನ್ನು ವರ್ಗಾಯಿಸಿ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಲೋಕಾಯುಕ್ತ ಸೂಚನೆ ನೀಡಿದೆ.

ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ಕರ್ನಾಟಕ ಲೋಕಾಯುಕ್ತಕ್ಕೆ ಪ್ರಕರಣಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದ್ದು, ಅನುಷ್ಠಾನಕ್ಕೆ ಕ್ರಮಕೈಗೊಳ್ಳುವಂತೆ ಲೋಕಾಯುಕ್ತ ರಿಜಿಸ್ಟ್ರಾರ್ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದಿದ್ದಾರೆ. ಆಗಸ್ಟ್ 11, 2022 ರಂದು ಹೈಕೋರ್ಟ್ ಎಸಿಬಿಯನ್ನು ರದ್ದುಪಡಿಸಿತು ಮತ್ತು ಅದರ ಪ್ರಕರಣಗಳು ಮತ್ತು ಸಿಬ್ಬಂದಿಯನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲು ಆದೇಶಿಸಿತು.

- Advertisement -

Latest News

error: Content is protected !!