Friday, June 5, 2026
Homeತಾಜಾ ಸುದ್ದಿಕರ್ನಾಟಕ ಹೈಕೋರ್ಟ್ : ಕೋರ್ಟ್ ಕಲಾಪಕ್ಕೆ ಹೊಸ ಮಾರ್ಗಸೂಚಿ ಪ್ರಕಟ

ಕರ್ನಾಟಕ ಹೈಕೋರ್ಟ್ : ಕೋರ್ಟ್ ಕಲಾಪಕ್ಕೆ ಹೊಸ ಮಾರ್ಗಸೂಚಿ ಪ್ರಕಟ

- Advertisement -
- Advertisement -

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮಾರಕ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ಕಲಾಪಕ್ಕೆ ಜೂನ್ 15ರಿಂದ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಜೂನ್ 15 ರಿಂದ ಎರಡು ವಾರಗಳ ಅವಧಿಗೆ ಒಂದು ಕೋರ್ಟ್ ನಲ್ಲಿ ಬೆಳಗ್ಗೆ 10, ಮಧ್ಯಾಹ್ನ 10 ಪ್ರಕರಣಗಳ ವಿಚಾರಣೆಯನ್ನು ಮಾತ್ರ ನಡೆಸಬಹುದಾಗಿದೆ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಇನ್ನು ಕೋರ್ಟ್ ಆವರಣಕ್ಕೆ ವಾದ ಮಂಡನೆ ಮಾಡಲಿರುವ ವಕೀಲರನ್ನು ಹೊರತುಪಡಿಸಿ ಇತರರಿಗೆ ಪ್ರವೇಶವಿಲ್ಲ. ವಕೀಲರು ಇಚ್ಛೆಸಿದರೆ ಮಾತ್ರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಹ ವಾದವನ್ನು ಮಂಡಿಸಬಹುದಾಗಿದ್ದು, ಮುಂದಿನ ಎರಡು ವಾರಗಳ ಕಾಲ ಪರಿಸ್ಥಿತಿಯನ್ನು ನೋಡಿಕೊಂಡು ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

- Advertisement -

Latest News

error: Content is protected !!