Monday, June 8, 2026
Homeತಾಜಾ ಸುದ್ದಿಕರ್ನಾಟಕ ಬಂದ್ ಮಾಡುವ ಅಗತ್ಯ ಇಲ್ಲ: ಬಿ ಎಸ್ ಯಡಿಯೂರಪ್ಪ

ಕರ್ನಾಟಕ ಬಂದ್ ಮಾಡುವ ಅಗತ್ಯ ಇಲ್ಲ: ಬಿ ಎಸ್ ಯಡಿಯೂರಪ್ಪ

- Advertisement -
- Advertisement -

ಬೆಂಗಳೂರು: ಮರಾಠಾ ಸಮುದಾಯದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ಸರ್ಕಾರದ ನಿರ್ಧಾರ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್​ಗೆ ಎಲ್ಲಾ ಕನ್ನಡಪರ ಸಂಘಟನೆಗಳು ಮತ್ತೊಮ್ಮೆ ತಮ್ಮಪಾಲ್ಗೊಳ್ಳುವಿಕೆ ಕುರಿತು ಸ್ಪಷ್ಟತೆ ನೀಡಿವೆ.ಇದೆ ವೇಳೆ ನಾಳೆ ನಡೆಯುತ್ತಿದೆ ಎನ್ನಲಾಗುತ್ತಿರುವ ಕರ್ನಾಟಕ ಬಂದ್ ಮಾಡುವ ಅಗತ್ಯ ಇಲ್ಲ. ಬಂದ್ ಮಾಡಿ ಜನರಿಗೆ ತೊಂದರೆ ಕೊಡಬೇಡಿ ಎಂದು ಕನ್ನಡಪರ ಸಂಘಟನೆಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿನಂತಿಸಿದ್ದಾರೆ.

ಕನ್ನಡಕ್ಕೆ ಏನೇನು ಆದ್ಯತೆ ಕೊಡಬೇಕು ಅದನ್ನ ಕೊಡುವಲ್ಲಿ ನಾನು ತಯಾರಿದ್ದೇನೆ ಅಲ್ಲದೆ ಇನ್ನೂ ಹೆಚ್ಚಿನದಾಗಿ ಕೊಡಲೂ ನಾನು ಸಿದ್ಧನಿದ್ದೇನೆ. ಸರ್ಕಾರಕ್ಕೆ ಎಲ್ಲರೂ ಸಹಕಾರ ನೀಡಬೇಕು ಕನ್ನಡಪರ ಸಂಘಟನೆಗಳ ಮುಖಂಡರ ಮನವಿಯನ್ನುಈಡೇರಿಸಲು ತಯಾರಿದ್ಧೇನೆ. ಎಲ್ಲಾ ಸಮಾಜವನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ. ದಯಮಾಡಿ ಬಂದ್ ಮಾಡಬೇಡಿ. ಎಂದು ಯಡಿಯೂರಪ್ಪ ವಿನಂತಿಮಾಡಿದ್ದಾರೆ.

- Advertisement -

Latest News

error: Content is protected !!