Friday, June 5, 2026
Homeಕರಾವಳಿಉಡುಪಿ​ಕಾರ್ಕಳ: ಪತಿ ನಿಧನದ ಶಾಕ್ ನಿಂದ ಹೊರಬರಲಾರದೆ ಪತ್ನಿ ಆತ್ಮಹತ್ಯೆ

​ಕಾರ್ಕಳ: ಪತಿ ನಿಧನದ ಶಾಕ್ ನಿಂದ ಹೊರಬರಲಾರದೆ ಪತ್ನಿ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಪತಿಯ ಮರಣದಿಂದ ಮಾನಸಿಕವಾಗಿ ನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 28ರಂದು ದುರ್ಗಾ ಗ್ರಾಮದ ಅಶ್ವತಕಟ್ಟೆ ಎಂಬಲ್ಲಿ ನಡೆದಿದೆ. ಅಶ್ವತಕಟ್ಟೆಯ ಬಾಂಕೋಡಿ ತಾರಾ ಶೆಟ್ಟಿ ಎಂಬವರ ಮಗಳು ರೇಖಾ(33) ಮೃತ ದುರ್ದೈವಿ.

ರೇಖಾಗೆ ಮದುವೆಯಾಗಿ ಮೂರು ವರ್ಷವಾಗಿದ್ದು ಇವರ ಪತಿ ರವಿ ಶೆಟ್ಟಿ ಲಾಕ್ ಡೌನ್ ನಿಂದಾಗಿ ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸಿ ಕಳೆದ ವರ್ಷ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಳಿಕ ರೇಖಾ ರವರು ಮಾನಸಿಕವಾಗಿ ನೊಂದು ಕೊಂಡಿದ್ದರೆನ್ನಲಾಗಿದೆ.

ಪತಿಯ ನಿಧನದ ನಂತರ ತಾಯಿ ತಾರಾ ಶೆಟ್ಟಿಯ ಜೊತೆ ಬಾಂಕೋಡಿಯಲ್ಲಿ ವಾಸವಾಗಿದ್ದರು. ಗಂಡನ ಸಾವಿನ ಶಾಕ್ ನಿಂದ ಹೊರಬರಲಾರದೆ ಖಿನ್ನತೆಯಿಂದಾಗಿ ರೇಖಾ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!