Friday, June 5, 2026
Homeಕರಾವಳಿಬೆಳ್ತಂಗಡಿ ತಾಲೂಕಿನ ಎರಡು ಕಡೆ ನಾಗರಹಾವು ಪ್ರತ್ಯಕ್ಷ ; ಹಾವುಗಳನ್ನು ರಕ್ಷಿಸಿ ಕಾಡಿಗೆ...

ಬೆಳ್ತಂಗಡಿ ತಾಲೂಕಿನ ಎರಡು ಕಡೆ ನಾಗರಹಾವು ಪ್ರತ್ಯಕ್ಷ ; ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟ ಉರಗ ಪ್ರೇಮಿಗಳು

- Advertisement -
- Advertisement -

ಬೆಳ್ತಂಗಡಿ : ತಾಲೂಕಿನ ಎರಡು ಕಡೆ ನಿನ್ನೆ ನಾಗರಹಾವುಗಳು  ಪ್ರತ್ಯಕ್ಷವಾಗಿದ್ದವು.  ಅದನ್ನು ಉರಗ ಪ್ರೇಮಿಗಳು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಇರಿಯಾಜೆ ಮನೆಯ ಸೀತಾರಾಮ ಆಳ್ವ ಅವರ ತೋಟದಲ್ಲಿ ನಿನ್ನೆ ಬೆಳಗ್ಗೆ ನಾಗರ ಹಾವು ಪ್ರತ್ಯಕ್ಷವಾಗಿತ್ತು. ತಕ್ಷಣ ಸೀತರಾಮ ಆಳ್ವರ  ಮಗ ವಿಜೇತ್ ಆಳ್ವ  ನವೀನ್ ಗೌಡ ಅವರಿಗೆ ವಿಷಯ ತಿಳಿಸಿ ಉಜಿರೆಯ ಸ್ನೇಕ್ ಜೋಯ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದು ನಂತರ ಸುರಕ್ಷಿತವಾಗಿ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಇನ್ನು  ಕರಂಬಾರು ಗ್ರಾಮದ ಬಂತಡ್ದದ ಕಾಲೋನಿಯಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿದ್ದು ತಕ್ಷಣ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಸ್ನೇಕ್ ಅಶೋಕ್ ಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಕರೆಸಿ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

- Advertisement -

Latest News

error: Content is protected !!