Thursday, May 2, 2024
Homeಕರಾವಳಿಬೆಳ್ತಂಗಡಿಯ ಕಾಶಿಬೆಟ್ಟುವಿನ ಸ್ವಾಮಿಪ್ರಸಾದ್ ಅಸೋಸಿಯೇಟ್ಸ್ ನಲ್ಲಿ 17 ಮಂದಿಗೆ ಕೊರೊನಾ: ಕೋವಿಡ್ ಸೋಂಕು ಹಿನ್ನೆಲೆ ಕಾಶಿಬೆಟ್ಟು...

ಬೆಳ್ತಂಗಡಿಯ ಕಾಶಿಬೆಟ್ಟುವಿನ ಸ್ವಾಮಿಪ್ರಸಾದ್ ಅಸೋಸಿಯೇಟ್ಸ್ ನಲ್ಲಿ 17 ಮಂದಿಗೆ ಕೊರೊನಾ: ಕೋವಿಡ್ ಸೋಂಕು ಹಿನ್ನೆಲೆ ಕಾಶಿಬೆಟ್ಟು ಪ್ರದೇಶ ಸೀಲ್ ಡೌನ್

spot_img
- Advertisement -
- Advertisement -

ಬೆಳ್ತಂಗಡಿ : ಇಲ್ಲಿನ  ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಶಿಬೆಟ್ಟು ಎಂಬಲ್ಲಿರುವ ಸ್ವಾಮಿಪ್ರಸಾದ್ ಅಸೋಸಿಯೇಟ್ಸ್ ನಲ್ಲಿ ಕೆಲಸ ಮಾಡುತ್ತಿರುವ 17 ಮಂದಿ ಕಾರ್ಮಿಕರಿಗೆ ಕೊರೊನಾ ಸೋಂಕು ಧೃಢಪಟ್ಟಿದೆ.  ಈ ಹಿನ್ನಲೆಯಲ್ಲಿ ಈ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಇಲ್ಲಿ ಸುಮಾರು 23 ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಕೋವಿಡ್ ಪರೀಕ್ಷೆ ವೇಳೆ ಇವರಲ್ಲಿ 17 ಮಂದಿ ಕಾರ್ಮಿಕರಿಗೆ ಕೊರೊನಾ ಸೋಂಕು ಧೃಢಪಟ್ಟಿದೆ.

ಸೋಂಕಿತರನ್ನು ಟಿ.ಬಿ.ಕ್ರಾಸ್ ನಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಆರು ಮಂದಿ ಕಾರ್ಮಿಕರು ಕೋವಿಡ್ ನಿಯಮಾನುಸಾರ ಸಂಸ್ಥೆಯಲ್ಲಿಯೇ ಪ್ರತ್ಯೇಕವಾಗಿರಿಸಿ  ಚಿಕಿತ್ಸೆ ನೀಡಲಾಗುತ್ತಿದೆ. 4 ದಿನಗಳ ಬಳಿಕ ಮರು ಕೋವಿಡ್ ಪರೀಕ್ಷೆಯನ್ನು ನಡೆಸಲಾಗುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!