Friday, June 5, 2026
Homeತಾಜಾ ಸುದ್ದಿನಟಿ ಕಂಗನಾ ರಣಾವತ್ ಬಾಡಿ ಗಾರ್ಡ್ ಕುಮಾರ್ ಶೆಟ್ಟಿ ಮಂಡ್ಯದಲ್ಲಿ ಬಂಧನ

ನಟಿ ಕಂಗನಾ ರಣಾವತ್ ಬಾಡಿ ಗಾರ್ಡ್ ಕುಮಾರ್ ಶೆಟ್ಟಿ ಮಂಡ್ಯದಲ್ಲಿ ಬಂಧನ

- Advertisement -
- Advertisement -

ಮಂಡ್ಯ: ಮುಂಬೈಯಲ್ಲಿ  ಬ್ಯುಟಿಷಿಯನ್ ಮೇಲಿನ ಅತ್ಯಾಚಾರ ಆರೋಪ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಕುಮಾರಶೆಟ್ಟಿ ಅಲಿಯಾಸ್ ಕುಮಾರ ಹೆಗಡೆಯನ್ನು ಮುಂಬೈ ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಕಿಕ್ಕೇರಿ ಪೊಲೀಸ್ ಠಾಣೆಯ ಪೊಲೀಸರ ಸಹಾಯದೊಂದಿಗೆ ಮುಂಬೈ ಪೊಲೀಸರು ಕುಮಾರ್ ಹೆಗಡೆಯನ್ನು ಬಂಧಿಸಿದ್ದಾರೆ.

ಮುಂಬೈನ ಬ್ಯುಟಿಷಿಯನ್ ಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು ಅಲ್ಲದೆ 50 ಸಾವಿರ ರುಪಾಯಿಯನ್ನು ತೆಗೆದುಕೊಂಡು ಕುಮಾರ್ ಹೆಗಡೆ ಕರ್ನಾಟಕ್ಕೆ ಬಂದಿದ್ದ. ನಂತರ ಆಕೆಯ ಸಂಪರ್ಕ ಕಡಿದುಕೊಡಿದ್ದು ಯುವತಿ ಮುಂಬೈನ ಉಪನಗರ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಮೇ 22ರಂದು ದೂರು ನೀಡಿದ್ದರು.

- Advertisement -

Latest News

error: Content is protected !!