Wednesday, June 24, 2026
Homeಕರಾವಳಿಉಡುಪಿಕಾರ್ಕಳ: ಕಾಲೇಜಿಗೆ ಹೋಗಲು ದುಡ್ಡು ಬೇಕೆಂದು 200 ರೂಪಾಯಿ ತೆಗೆದುಕೊಂಡು ₹25.66 ಲಕ್ಷ ಹಣ ದೋಚಿದ...

ಕಾರ್ಕಳ: ಕಾಲೇಜಿಗೆ ಹೋಗಲು ದುಡ್ಡು ಬೇಕೆಂದು 200 ರೂಪಾಯಿ ತೆಗೆದುಕೊಂಡು ₹25.66 ಲಕ್ಷ ಹಣ ದೋಚಿದ ವಂಚಕ

- Advertisement -
- Advertisement -

ಕಾರ್ಕಳ: ಕಾಲೇಜಿಗೆ ಹೋಗಲು ದುಡ್ಡು ಬೇಕೆಂದು ಗೂಗಲ್ ಪೇ ನಲ್ಲಿ 200 ರೂಪಾಯಿ ತೆಗೆದುಕೊಂಡು ಬಳಿಕ ಯುವಕನೊಬ್ಬ ವ್ಯಕ್ತಿಯಿಂದ  ₹25.66 ಲಕ್ಷ ಹಣ ದೋಚಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ನಲ್ಲೂರು ಗ್ರಾಮದ ಗಣೇಶ ಆಚಾರ್ಯ (34) ಎಂಬವರಿಗೆ 2024ರ ಜುಲೈನಲ್ಲಿ ಇನ್‌ಸ್ಟಾಗ್ರಾಂ ಮೂಲಕ ಸುಜನ್ ಶೆಟ್ಟಿ ಸಿದ್ದಾಪುರ ಎಂಬಾತನ ಪರಿಚಯವಾಗಿತ್ತು. ಆರಂಭದಲ್ಲಿ ಕಾಲೇಜಿಗೆ ಹೋಗಲು ₹200 ಬೇಕೆಂದು ಕೇಳಿ ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದ ಆರೋಪಿ, ನಂತರ ಹಂತಹಂತವಾಗಿ ತನ್ನ ಬಲೆ ಬೀಸಿದ್ದಾನೆ. ಕಾಲೇಜು ಫೀಸ್, ಅನಾರೋಗ್ಯದ ನೆಪ, ಲ್ಯಾಪ್‌ಟಾಪ್ ರಿಪೇರಿ ಹಾಗೂ ಕೃಷಿ ಸಾಲ ತೀರಿಸುವ ಉದ್ದೇಶಗಳಿಗಾಗಿ ಹಣ ಬೇಕೆಂದು ನಂಬಿಸಿ ಗಣೇಶ್ ಅವರಿಂದ ಲಕ್ಷಾಂತರ ರೂಪಾಯಿ ಪಡೆದಿದ್ದಾನೆ.
ದೂರುದಾರ ಗಣೇಶ ಆಚಾರ್ಯ ಅವರಿಗೆ ಪಡೆದ ಹಣವನ್ನು ವಾಪಸ್ ನೀಡಲು ತನ್ನ ಬ್ಯಾಂಕ್ ಖಾತೆ ಸರಿಪಡಿಸಬೇಕಿದೆ ಎಂದು ಮತ್ತೆ ಹಣ ಪೀಕಿದ್ದ ಆರೋಪಿ, 2024ರ ಜುಲೈನಿಂದ 2026ರ ಏಪ್ರಿಲ್‌ವರೆಗೆ ಒಟ್ಟು ₹25,66,000 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆದರೆ ಹಣ ವಾಪಸ್ ನೀಡದೆ ವಂಚಿಸಿರುವುದರಿಂದ ಗಣೇಶ್ ಪೊಲೀಸರ ಮೊರೆ ಹೋಗಿದ್ದಾರೆ. ಆರೋಪಿಯ ವಿರುದ್ಧ ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!