ನವಿಮುಂಬಯಿ : ಇಲ್ಲಿಯ ನೆರುಲು ನಿವಾಸಿ ಸಮಾಜ ಸೇವಕ ಹರೀಶ್ ಪೂಜಾರಿಯವರಿಗೆ ಇಂಡಿಯನ್ ಏಂಪಯೈರ್ ಯುನಿವರ್ಸಿಟಿ ಮತ್ತು ಯುನಿವೆರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ಜಂಟಿಯಾಗಿ ಗುರುತಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿವಿತ್ತು ಸನ್ಮಾನಿಸಿದೆ.

ಜುಲೈ 24 ರಂದು ಬೆಂಗಳೂರಿನ ಹೊಸುರುನಲ್ಲಿರುವ ಕ್ರೀಸ್ಟಲ್ ಪಂಚತಾರಾ ಹೊಟೇಲ್ನಲ್ಲಿ ನಡೆದ ವೈಭಯುಕ್ತ ಕಾರ್ಯಕ್ರಮದಲ್ಲಿ ಇಂಡಿಯನ್ ಏಂಪಯೈರ್ ಯುನಿವರ್ಸಿಟಿಯ ಅಧ್ಯಕ್ಷರಾದ ಡಾ. ಕೆ. ಪ್ರಭಾಕರ ,ಯುನಿವೆರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ನ ಅಧ್ಯಕ್ಷ ಡಾ. ಪೌಲ್ ಇಮನುಜಾರ್, ಮುಖ್ಯ ಅತಿಥಿಗಳಾಗಿ ಕಾಳಹಸ್ತಿ ಸಬ್ ಕೋರ್ಟ್ ನ ಉಪಜಡ್ಜ್ ಡಾ. ಜೆ ಹರಿಡೋಶ್, ಉಪ ಪೊಲೀಸ್ ಆಯುಕ್ತರಾದ ಡಾ. ಆರ್. ಶಿವಕುಮಾರ್, ಮಾಜಿ ಶಾಸಕ ಡಾ. ಕೆ. ಎ. ಮನೋಹರನ್ ,ಪ್ರಸಿದ್ಧ ನೃತ್ಯ ಕಲಾವಿದೆ ಶ್ರೀಮತಿ ಪದ್ಮಾ ಸುಬಯ್ಯರವರ ಉಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಅನ್ನು ಪ್ರಧಾನ ಮಾಡಲಾಯಿತು.

ಹರೀಶ್ ಪೂಜರಿಯವರು ಮೂಲತಃ ಕಾರ್ಕಳದ ನಕ್ರೇ ಪೆತ್ತಾಜೆಯ ಶ್ರೀಮತಿ ಸಂಜೀವಿ ಪೂಜಾರಿ ಮತ್ತು ಕಾರ್ಕಳ ದಿ. ಪೆರ್ವಾಜೆ ಸುಂದರ ಪೂಜಾರಿಯವರ ದ್ವಿತೀಯ ಪುತ್ರರಾಗಿದ್ದು,ಮುಂಬಯಿ ಹಾಗೂ ನವಿಮುಂಬಯಿಯ ಹಲವಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲಿ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿ ತನ್ನಿಂದಾದ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಡಿ.ಪಿ. ವರ್ಲ್ಡ್ ನವಾಸೇವಾ ಇಂಟೆರ್ ನ್ಯಾಷನಲ್ ಬಹು ಅಂತಾರಾಷ್ಟ್ರೀಯ ಕಂಪನಿಯಲ್ಲಿ ಸತತ 21 ವರ್ಷ ಉನ್ನತ ಅಧಿಕಾರಿಯಾಗಿ ಸುದೀರ್ಘ ಸೇವೆ ಮಾಡಿ ನಿವೃತ್ತಿ ಹೊಂದಿದ್ದಾರೆ.
ಹರೀಶ್ ಪೂಜಾರಿಯವರು ಶ್ರೀ ನಾರಾಯಣ ಗುರು ಧರ್ಮ ಪರಿಪಾಲನೆ ಸಂಘ – ಮಾಹಾರಾಷ್ಟ್ರ, ಸೆಲ್ಯೂಟ್ ತಿರಂಗ ಕರ್ನಾಟಕ ಘಟಕ – ಮಾಹಾರಾಷ್ಟ್ರ, ಬಿಜೆಪಿ ದಕ್ಷಿಣ ಭಾರತ ಘಟಕ ನವಿಮುಂಬಯಿ, ವಿಶ್ವ ಮಾನವಧಿಕಾರ ಸಂಸ್ಥೆ – ನವಿಮುಂಬಯಿ, ಗ್ರಾಹಕರ ಉಪಬೋಕ್ತ ಸಮಿತಿ – ನವಿಮುಂಬಯಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀ ಶಬರಿಮಲೆ ಅಯ್ಯಪ್ಪ ಸೇವಾಸಂಗಮ್ – ನವಿಮುಂಬಯಿಯಲ್ಲಿ ಉಪಾಧ್ಯಕ್ಷರಾಗಿ, ಬಿಲ್ಲವರ ಅಸೋಸಿಯೇಷನ್ ನವಿಮುಂಬಯಿ ಸ್ಥಳೀಯ ಸಮಿತಿ, ಜನತಾ ಶಿಕ್ಷಣ ಸಂಘ ಮತ್ತು ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘ – ಮುಂಬಯಿ, ರಂಗಭೂಮಿ ಫೈನ್ ಅರ್ಟ್ಸ್ – ನವಿಮುಂಬಯಿನಲ್ಲಿ ಆಡಳಿತ ಸಮಿತಿ ಸದ್ಯಸರಾಗಿ ಹಾಗೂ ಇನ್ನು ಹತ್ತು ಹಲವಾರು ಸಂಘ- ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರು ಕ್ಯಾಂಟಿನಿನಲ್ಲಿ ಕೆಲಸ ಮಾಡಿ ಮದರ್ ಇಂಡಿಯಾ ಧರ್ಮಾರ್ಥಾ ರಾತ್ರಿ ಶಾಲೆಯಲ್ಲಿ ಕಲಿತವರಾಗಿದ್ದಾರೆ. ಇಂತಹ ಸರಳ ಸಜ್ಜನ ಸಮಾಜ ಸೇವಕ ವ್ಯಕ್ತಿತ್ವಕ್ಕೆ ಡಾಕ್ಟರೇಟ್ ಪದವಿ ದೊರಕಿರುವುದು ನಿಜಕ್ಕೂ ಅಭಿನಂದನಾರ್ಹ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಅಧ್ಯಕ್ಷರಾದ ಡಾ. ಎಲ್ ಕೆ ಸುವರ್ಣ ಹಾಗೂ ಹಿಂದುವಾದಿ ಮುರಳಿ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದ್ದಾರೆ.


