Wednesday, June 24, 2026
Homeಕರಾವಳಿಉಡುಪಿಕಾರ್ಕಳ ಎಪಿಎಂಸಿ ಬಿಜೆಪಿ ತೆಕ್ಕೆಗೆ: ಅಧ್ಯಕ್ಷರಾಗಿ ಮೋಹನದಾಸ್ ಶೆಟ್ಟಿ ಆಯ್ಕೆ

ಕಾರ್ಕಳ ಎಪಿಎಂಸಿ ಬಿಜೆಪಿ ತೆಕ್ಕೆಗೆ: ಅಧ್ಯಕ್ಷರಾಗಿ ಮೋಹನದಾಸ್ ಶೆಟ್ಟಿ ಆಯ್ಕೆ

- Advertisement -
- Advertisement -

ಕಾರ್ಕಳ: ಕಾರ್ಕಳ ಎಪಿಎಂಸಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಬೆಂಬಲಿತ ಸದಸ್ಯರು ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.

ಕಾರ್ಕಳ ಎಪಿಎಂಸಿಯಲ್ಲಿ ಬಿಜೆಪಿ ಬೆಂಬಲಿತ 9 ಹಾಗೂ ಕಾಂಗ್ರೆಸ್ ಬೆಂಬಲಿತ 4 ಸದಸ್ಯರು ಒಳಗೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೋಹನದಾಸ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರತ್ನಾಕರ ಅಮೀನ್ ನಾಮಪತ್ರ ಸಲ್ಲಿಸಿದ್ದರು. ಸಂಖ್ಯಾಬಲದಲ್ಲಿ ಬಿಜೆಪಿಯೇ ಮೇಲುಗೈ ಹೊಂದಿರುವ ಕಾರಣ ಇವರಿಬ್ಬರು ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.

ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಪುರಂದರ ಹೆಗ್ಡೆ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಜುಲೈ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರ ನಡೆಯಲಿದೆ.

ಮೋಹನ್‍ದಾಸ್ ಶೆಟ್ಟಿ ಅವರು ಬ್ಯಾಂಕ್‍ವೊಂದರ ನಿವೃತ್ತಿ ಅಧಿಕಾರಿಯಾಗಿದ್ದಾರೆ. ರತ್ನಾಕರ ಅಮೀನ್ ಅವರು ನಿಕಟಪೂರ್ವದಲ್ಲಿಯೂ ಉಪಾಧ್ಯಕ್ಷರಾಗಿದ್ದರು.

- Advertisement -

Latest News

error: Content is protected !!